Belagavi NewsBelgaum NewsElection NewsKannada NewsKarnataka News

ನಾಳೆ ಕೆಲವು ಶಾಲಾ-ಕಾಲೇಜುಗಳಿಗೆ ರಜೆ : ಡಿಸಿ ನಿತೇಶ್ ಪಾಟೀಲ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳಿಗೆ ಮತ ಎಣಿಕೆ‌ ದಿನವಾದ‌ ಮಂಗಳವಾರ ಜೂನ್ 4 ರಂದು‌ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಕಾನೂನು ಸುವ್ಯೆವಸ್ಥೆ ಕಾಪಾಡುವ ನಿಟ್ಟಿನಲ್ಲಿ 144 ಕಾಯ್ದೆಯಡಿ ಬೆಳಗಾವಿಯ ಆರ್ ಪಿ ಡಿ ಕಾಲೇಜಿನ ವ್ಯಾಪ್ತಿಯಲ್ಲಿ  ಬರುವ, ಎಸ್ ಕೆ ಇ ಭಂಡಾರಿ ಕನ್ನಡ ಮಾಧ್ಯಮ ಶಾಲೆ, ಎಸ್ ಕೆ ಇ  ಭಂಡಾರಿ ಮರಾಠಿ ಮಾಧ್ಯಮ ಶಾಲೆ, ಡಿವೈನ್ ಪ್ರಾವಿಡೆನ್ಸ್ ಆಂಗ್ಲ ಮಾಧ್ಯಮ ಶಾಲೆ, ಸ್ವಾಧ್ಯಾ ವಿದ್ಯಾಮಂದಿರ ಶಾಲೆ, ಟಿಳಕವಾಡಿಯ ಎಚ್ ಎಸ್  ಶಾಲೆ, ಬಾಲಿಕಾ ಆದರ್ಶ ಶಾಲೆ, KHPS ಸಂ: 5 ಟಿಳಕವಾಡಿ, MHPS ಸಂಖ್ಯೆ: 9 ಟಿಳಕವಾಡಿ, ಜಿ ಜಿ ಚಿಟ್ನಿಸ್ ಎಚ್ಎಸ್ ಶಾಲೆ, ಹೆರ್ವಾಡ್ಕರ್ ಶಾಲೆ, ಗೋಮಟೇಶ್ ವಿದ್ಯಾಪೀಠ ಎಲ್ಲಾ ಶಾಲೆಗಳು, KLS ಎಲ್ಲಾ ಶಾಲೆಗಳು, ಜೈನ್ ಹೆರಿಟೇಜ್ ಶಾಲೆ, ಗೋಮಟೇಶ್ ಕಾಲೇಜ್, ಕೆಎಲ್‌ಎಸ್ ಗೊಗ್ಟೆ ಕಾಲೇಜು, ಆರ್ ಎಲ್ ಕಾನೂನು ಕಾಲೇಜು, ಆರ್‌ಪಿಡಿ ಕಾಲೇಜು, ಇಂದ್ರಾಗಾಂಧಿ ಮುಕ್ತ ವಿಶ್ವವಿದ್ಯಾಲಯ. ಜೈನ್ ಕಾಲೇಜು ಹಾಗೂ ಪ್ರೇರಣಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟಿಲ್ ಅವರು ತಿಳಿಸಿದ್ದಾರೆ.

Related Articles

Back to top button