Kannada NewsKarnataka News

ಪ್ರಾಣಿ ಕಲ್ಯಾಣದಲ್ಲಿ ಪೊಲೀಸರ ಸಹಕಾರ: ಡಾ.ಸೋನಾಲಿ ಸರ್ನೋಬತ್ – ಡಾ.ವಿಕ್ರಂ ಅಮಟೆ ಚರ್ಚೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ, ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಂಗಳವಾರ ಬೆಳಗಾವಿ ಡಿಸಿಪಿ ಡಾ. ವಿಕ್ರಂ ಅಮಟೆ ಅವರನ್ನು ಭೇಟಿ ಮಾಡಿ, ಪ್ರಾಣಿ ಕಲ್ಯಾಣ ಮಂಡಳಿ ಕೆಲಸದಲ್ಲಿ ಪೊಲೀಸರ ಸಹಕಾರದ ಕುರಿತು ಚರ್ಚಿಸಿದರು.

ವಿಕ್ರಂ ಅಮಟೆ ಪಶು ವೈದ್ಯರಾಗಿದ್ದು, ಪ್ರಾಣಿಗಳ ರಕ್ಷಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಬ್ಬರೂ ಚರ್ಚಿಸಿದರು. ಈ ಸಂಬಂಧ ರಚಿಸಬೇಕಾದ ಎಸ್ ಪಿಸಿಎ ಸಮಿತಿ ಕುರಿತು ಸಹ ಚರ್ಚಿಸಲಾಯಿತು.

Home add -Advt

ಪ್ರಾಣಿ ಕಲ್ಯಾಣ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅಮಟೆ ಭರವಸೆ ನೀಡಿದರು.  ಮುಖ್ಯಮಂತ್ರಿಗಳ ಪದಕ ಪಡೆದಿರುವುದಕ್ಕಾಗಿ ಮತ್ತು ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಗಮನ ನೀಡುತ್ತಿರುವುದಕ್ಕಾಗಿ ನಿಯತಿ ಫೌಂಡೇಶನ್ ವತಿಯಿಂದ ಅಮಟೆ ಅವರನ್ನು ಸೋನಾಲಿ ಸರ್ನೋಬತ್ ಸನ್ಮಾನಿಸಿದರು.

Related Articles

Back to top button