Kannada NewsKarnataka NewsLatest

Breaking News: ಬೆಳಗಾವಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ, ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 50 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಕರ್ನಾಟಕ ಲೋಕಾಯುಕ್ತ ಎಸ್ಪಿ   ಯಶೋದಾ ವಂಟಗುಡಿ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.

Home add -Advt

 ಬೆಳಗಾವಿಯ ಗಿರೀಶ್ ಕುಲಕರ್ಣಿ ಎನ್ನುವವರು ದೂರು ನೀಡಿದ್ದರು. ಜಂಟಿ ನೀರ್ದೇಶಕ  ಶಿವಪುತ್ರಪ್ಪ ಆರ್ ಎಚ್ ಮತ್ತು ಸಹಾಯಕ ನಿರ್ದೇಶಕ ಪದ್ಮಕಾಂತ್ ಜಿ ಲೋಕಾಯುಕ್ತ ಬಲೆಗೆ ಬಿದ್ದವರು. ಸಬ್ಸಿಡಿ ಆದೇಶ ನೀಡಲು 50 ಸಾವಿರ ರೂ. ಲಂಚೆ ಕೇಳಿ ಪಡೆಯುತ್ತಿದ್ದಾಗ ದಾಳಿ ನಡೆಸಲಾಯಿತು.

ಇಬ್ಬರನ್ನೂ ಬಂದಿಸಿ, ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.

ಶಿಕ್ಷಕರ ವರ್ಗಾವಣೆಗೆ 15 ಸಾವಿರ ರೂ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ BEO

Related Articles

Back to top button