Election NewsKannada NewsKarnataka NewsPolitics
ಮಾಜಿ ಸಚಿವ ಬೈರತಿ ಬಸವರಾಜ್ ಆಪ್ತ ಸಾಹಾಯಕನಿಗೆ ಐಟಿ ಶಾಕ್: ಹಣ, ಚಿನ್ನ ಸಿಜ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲೋಕಸಭೆ ಚುನಾವಣೆ ಹೊತ್ತಲ್ಲೇ ಮಾಜಿ ಸಚಿವ ಬೈರತಿ ಬಸವರಾಜ್ ಆಪ್ತ ಸಹಾಯಕನಿಗೆ ಶಾಕ್ ಎದುರಾಗಿದೆ.
ಹೊಸೂರು ನಿವಾಸಿ ಲೋಕೇಶ್ ಮನೆಗೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 1 ಕೋಟಿ 20 ಲಕ್ಷ ನಗದು, 800 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
3 ದಿನಗಳ ಹಿಂದೆ ಚೆಕ್‌ಪೋಸ್ಟ್‌ನಲ್ಲಿ ಹಣದ ಜೊತೆಗೆ ಲೋಕೇಶ್ ಸಿಕ್ಕಿ ಬಿದ್ದಿದ್ರು. ದಾಖಲೆ ಇಲ್ಲದ 10 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇದೇ ಅನುಮಾನದ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.