
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪರಿಷತ್ ಸದಸ್ಯ, ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಾರು ಕಾಂಗ್ರೆಸ್ ತೊರೆದರೂ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾರು ರಾಜೀನಾಮೆ ಕೊಟ್ಟರೂ ಪಕ್ಷಕ್ಕೆ ತೊಂದರೆಯಾಗಲ್ಲ. ಅನೇಕರು ಕಾಂಗ್ರೆಸ್ ಗೆ ಬರ್ತಾರೆ. ಅನೇಕರು ಹೋಗ್ತಾರೆ. ಅದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾನು ರಾಜೀನಾಮೆ ಕೊಟ್ಟರೂ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ ಎಂದು ಹೇಳಿದರು.
ಸಿ.ಎಂ.ಇಬ್ರಾಹಿಂ ಮೊದಲು ನನಗೆ ಸ್ನೇಹಿತರಾಗಿದ್ದರು. ಈಗಲೂ ಸ್ನೇಹಿತರಾಗಿದ್ದಾರೆ. ಅವರು ರಾಜೀನಾಮೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಯಾರೇ ಪಕ್ಷ ಬಿಟ್ಟರೂ ಪಕ್ಷಕ್ಕೆ ಯಾವ ತೊಂದರೆಯಾಗಲ್ಲ ಎಂದು ಹೇಳಿದರು.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಸಿ.ಎಂ ಇಬ್ರಾಹಿಂ