Latest

ರೋಶನ್ ಬೇಗ್ ಕಚೇರಿ, ಮನೆಗಳ ಮೇಲೂ ಇಡಿ ದಾಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಾಸಕ ಜಮೀರ್ ಅಹ್ಮದ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ರೋಶನ್ ಬೇಗ್ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಿದೆ.

ಐಎಂಎ ಹಗರಣದ ತನಿಖೆಯ ಮುಂದುವರಿದ ಭಾಗವಾಗಿ ಈ ಇಬ್ಬರ ಮೇಲೂ ದಾಳಿ ನಡೆದಿದ್ದು, ಕಾಗದಪತ್ರಗಳ ಪರಿಶೀಲನೆ ನಡೆದಿದೆ.

ರೋಶನ್ ಬೇಗ್ ಆಪ್ತ ಸಹಾಯಕನನ್ನು ಇಡಿ ಅಧಿಕಾರಿಗಳು ಈಗಾಗಲೆ ವಶಕ್ಕೆ ಪಡೆದಿದ್ದಾರೆ. ಹಲವು ದಾಖಲೆಗಳನ್ನೂ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಅವರ ಇಬ್ಬರು ಮಕ್ಕಳ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಎರಡೂ ಕಡೆ ತಪಾಸಣೆ ಮುಂದುವರಿದಿದೆ.

ಜಮೀರ್ ಮೇಲಿನ ದಾಳಿಯನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಡಿ.ಕೆ.ಸುರೇಶ ಟೀಕಿಸಿದ್ದು, ಇದು ರಾಜಕೀಯ ಪ್ರೇರಿತ ದಾಳಿ ಎಂದಿದ್ದಾರೆ. ಬಿಜೆಪಿಯವರ ಅಕ್ರಮ ಮಾಡಿಲ್ವಾ, ಅವರ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Home add -Advt

ಜಮೀರ್ ನಿವಾಸದ ಮೇಲಿನದ್ದು ಐಟಿ ದಾಳಿಯಲ್ಲ….

Related Articles

Back to top button