Latest

ಶಿರಸಿ ಬಳಿ ಹಳ್ಳದಲ್ಲಿ ಕೊಚ್ಚಿಹೋದ ಕಾರು : ನಾಲ್ಕೈದು ಜನರು ಸಿಲುಕಿರುವ ಶಂಕೆ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಹಳ್ಳದಲ್ಲಿ ಕೊಚ್ಚಿಹೋಗಿದ್ದು 4 ಅಥವಾ 5 ಜನರು ಕಾರಿನೊಳಗೆ ಸಿಲುಕಿರುವ ಶಂಕೆ ಇದೆ.

ಕೋಡನಮನೆ ಎಂಬಲ್ಲಿ ಸೇತುವೆೆಯಿಂದ ಕೆಳಗುರುಳಿದ ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್ ದೂರ ಹೋಗಿ ಬಿದ್ದಿದೆ. ಬುಧವಾರ ರಾತ್ರಿಯೇ ಘಟನೆ ನಡೆದಿದ್ದು ಗುರುವಾರ ಮಧ್ಯಾಹ್ನದ ಹೊತ್ತಿಗೆ ಬೆಳಕಿಗೆ ಬಂದಿದೆ. ಆದರೆ ಕಾರಿನ ಬಾಗಿಲುಗಳು ಇನ್ನೂ ಮುಚ್ಚಿಯೇ ಇದ್ದು ಪೊಲೀಸರು ಸ್ಥಳಕ್ಕೆ ಬಂದ ನಂತರ ನಿಖರ ಮಾಹಿತಿ ತಿಳಿಯಬೇಕಿದೆ.

ಕಾರಿನೊಳಗೆ 4 ಅಥವಾ 5 ಜನರು ಇರಬಹುದು ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಅವರ ಸ್ಥಿತಿ ಏನಾಗಿದೆ ಎನ್ನುವುದು ಗೊತ್ತಾಗಿಲ್ಲ. ಕಾರು ಧಾರವಾಡದ್ದು ಎನ್ನಲಾಗುತ್ತಿದೆ.

ನಿನ್ನೆ ಶಿರಸಿ, ಸಿದ್ದಾಪುರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಾಗಾಗಿ ಕಾರಿನ ಚಾಲಕನಿಗೆ ತಿರುವಿನಲ್ಲಿ ರಸ್ತೆ ಸರಿಯಾಗಿ ಕಾಣದೆ ಹಳ್ಳದಲ್ಲಿ ಹೋಗಿ ಬಿದ್ದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ.

Home add -Advt

ಶಿರಸಿ ಬಳಿ ಕೊಚ್ಚಿಹೋದ ಕಾರಿನಲ್ಲಿ ಯುವತಿ ಸೇರಿ ಮೂವರ ಸಾವು – ವಿಡಿಯೋ ಸಹಿತ ವರದಿ

Related Articles

Back to top button