Belagavi NewsBelgaum NewsKarnataka News

*ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದಾಗಿ ಬಹಳಷ್ಟು ಮಹಿಳೆಯರ ಜೀವನೋಪಾಯಕ್ಕೆ ಅನುಕೂಲವಾಗಿದೆ. ಗೃಹಲಕ್ಷ್ಮೀ ಹಣದಿಂದಾಗಿ ಹಲವು ಮಹಿಳೆಯರು ಸ್ವಾಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಲವು ಮಹಿಳೆಯರಿಗೆ ಜೀವನಾಧಾರವಾಗಿದೆ. ಬೆಳಗಾವಿಯ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯೋಜನೆ ಹಣದಿಂದ ಬೇಸಾಯಕ್ಕಾಗಿ ಎತ್ತು ಖರೀದಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತವಗ ಗ್ರಾಮದ ಬಡ ರೈತ ಮಹಿಳೆ ಬಸವ್ವ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಎತ್ತು ಖರೀದಿ ಮಾಡಿದ್ದಾರೆ.

Home add -Advt

ಬಸವ್ವ ಹಾಗೂ ಶಿವಪ್ಪ ದಂಪತಿ ಬಳಿ ಒಂದು ಎತ್ತು ಮಾತ್ರ ಇತ್ತು. ಇದೀಗ ಗೃಹಲಕ್ಷ್ಮೀ ಹಣದಿಂದ 22 ಸಾವಿರ ರೂಪಾಯಿ ಕೊಟ್ಟು ಮತ್ತೊಂದು ಎತ್ತು ಖರೀದಿ ಮಾಡಿದ್ದಾರೆ. ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗೆ ಗೃಹಲಕ್ಷ್ಮೀ ಯೋಜನೆ ಹಣದಿಂದ ಇದೀಗ ಎತ್ತು ಖರೀದಿಸಲು ಸಾಧ್ಯವಾಗಿದೆ.

ಗೋಕಾಕ ತಾಲೂಕಿನ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಾಹಾಂತೇಶ ಕಡಾಡಿ ಭೇಟಿ ನೀಡಿ ಪರಿಶೀಲನೆನಡೆಸಿದರು. ನೆರವು ಕೂಡ ನೀಡಿದ್ದಾರೆ.


Related Articles

Back to top button