Latest

ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿದ ಭಾರತ

ಪ್ರಗತಿವಾಹಿನಿ ಸುದ್ದಿ, ಡೆರ್ಬಿ: ಇಲ್ಲಿನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಎರಡನೇ T20I ಪಂದ್ಯದಲ್ಲಿ ಭಾರತದ ಮಹಿಳಾ ತಂಡ 8 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.

ಭಾರತ ಮಹಿಳಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 53 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿ ಜಯ ಸಾಧಿಸಲು ನೆರವಾಗಿದ್ದಾರೆ.

ಟಾಸ್ ಗೆದ್ದ ನಂತರ ಇಂಗ್ಲೆಂಡ್ ನೀಡಿದ 143 ರನ್ ಗುರಿಯನ್ನು ಭಾರತ ಇನ್ನೂ 20 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಎಡಗೈ ಆರಂಭಿಕ ಆಟಗಾರ್ತಿ ತಮ್ಮ ನಾಕ್‌ನಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ 22 ಎಸೆತಗಳಲ್ಲಿ ನಿರ್ಣಾಯಕ 29 ರನ್ ಗಳಿಸಿ ರನ್ ಚೇಸ್‌ನಲ್ಲಿ ನೆರವಾದರು.

T20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಗುರುವಾರ ರಾತ್ರಿ ನಡೆಯಲಿದೆ.

Home add -Advt

ಆಂಬ್ಯುಲೆನ್ಸ್ ವಿಳಂಬ; ಅಪಘಾತದ ಗಾಯಾಳು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಾಟ

Related Articles

Back to top button