
ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು –
ಬೆಂಗಳೂರು ನಗರ ಬೆಳೆಯುತ್ತಿದ್ದಂತೆ ಟ್ರಾಫಿಕ್ ಕಿರಿಕಿರಿಯೂ ಹೆಚ್ಚಿದೆ. ಪೀಕ್ ಅವರ್‌ಗಳಲ್ಲಿ ಒಂದೆರಡು ಕಿಮೀ ಕ್ರಮಿಸಲಿಕ್ಕೂ ಗಂಟೆಗಳವರೆಗೆ ಹಿಡಿಯುತ್ತಿದೆ. ಇಂಥಹ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆಯಲು ಖಾಸಗಿ ಕಂಪನಿಗಳು ಸಹಭಾಗಿತ್ವದಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲು ಮುಂದಾಗಿವೆ.
ಟ್ರಾಫಿಕ್ ಕಿರಿಕಿರಿಯಿಲ್ಲದೆ ಕೆಲವೇ ನಿಮಿಷಗಳಲ್ಲಿ ನಿಗದಿತ ಸ್ಥಳ ತಲುಪಬಹುದು.
ಫ್ಲೈ ಬ್ಲೇಡ್‌ಹಂಚ್ ವೆಂಚರ್ಸ್ ಮತ್ತು ಬ್ಲೇಡ್ ಅರ್ಬನ್ ಮೊಬಿಲಿಟಿ ಇಂಕ್ ಸಂಸ್ಥೆಗಳು ಈ ಹೆಲಿಕಾಪ್ಟರ್ ಸೇವೆ ಒದಗಿಸಲು ಮುಂದಾಗಿವೆ.
ಪ್ರಾರಂಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ಎಎಲ್‌ವರೆಗೆ ಹೆಲಿಕಾಪ್ಟರ್ ಸೇವೆ ನೀಡಲಿದೆ. ಎಲೆಕ್ಟ್ರಿಕಲ್ ವರ್ಟಿಕಲ್ ಲ್ಯಾಂಡಿಂಗ್ ಮತ್ತು ವರ್ಟಿಕಲ್ ಟೇಕ್ ಆಫ್ ಏರ್ ಟ್ಯಾಕ್ಸಿಗಳನ್ನು ಈ ಹಾರಾಟಕ್ಕೆ ಬಳಸಲಾಗುತ್ತಿದ್ದು, ಇದರಿಂದ ಇಂಗಾಲದ ಹೊರ ಸೂಸುವಿಕೆ ಕಡಿಮೆಯಾಗಿ ವಾಯು ಮಾಲಿನ್ಯ ಕಡಿಮೆಯಾಗಲಿದೆ.
ಇದೇ ಸಂಸ್ಥೆಯು ಮುಂದಿನ ದಿನಗಳಲ್ಲಿ ಗೋವಾದಲ್ಲೂ ಹೆಲಿಕಾಪ್ಟರ್ ಸೇವೆ ನೀಡುವ ಗುರಿ ಹೊಂದಿದೆ. ಸಧ್ಯ ಬೆಂಗಳೂರಿನಲ್ಲಿ ಪ್ರತಿ ಸೀಟಿಗೆ ಸುಮಾರು 3250 ರೂ. ದರ ನಿಗದಿ ಮಾಡಲಾಗುತ್ತಿದೆ ಎಂದು ಮಿಂಟ್ ವರದಿ ಮಾಡಿದೆ.
https://pragati.taskdun.com/latest/11-lak-car-repair-estimation-cost-is-22-laks/