Film & EntertainmentKarnataka NewsLatestPolitics

*ಕನ್ನಡ ಚಲನ ಚಿತ್ರರಂಗ ಶ್ರೀಮಂತ ಪರಂಪರೆ ಹೊಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಐರಾ ಫಿಲ್ಮ್ಸ್ ವತಿಯಿಂದ ನಿರ್ಮಿಸಿರುವ ‘ಅಣ್ಣ from Mexico’ ಚಿತ್ರದ ಟೀಸರ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಲನ ಚಿತ್ರರಂಗ ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಾನು ಕನ್ನಡ ಸಿನಿಮಾಗಳನ್ನು ಪ್ರೀತಿಸುವೆ. ಮುಂದಿನ ‌ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸುವ ಆಸೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಐರಾ ಫಿಲ್ಮ್ ವತಿಯಿಂದ ನಿರ್ಮಿಸಲಾಗಿರುವ ಚೊಚ್ಚಲ ಚಿತ್ರ ‘ಅಣ್ಣ from Mexico’ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿ ಸಚಿವರು ಮಾತನಾಡಿದರು. ‌

ಸಿನಿಮಾ ಹೊಸತನದಿಂದ‌ ಕೂಡಿದ್ದು, ಕನ್ನಡ ಚಲನಚಿತ್ರ ರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಮುಂದಿನ ದಿನಗಳಲ್ಲಿ ಸದಭಿರುಚಿ, ಸಾಮಾಜಿಕ, ‌ಕೌಟುಂಬಿಕ ಹಿನ್ನೆಲೆ ಹೊಂದಿರುವ ಚಿತ್ರಗಳನ್ನು ‌ನಿರ್ಮಿಸುವ ಆಸೆ ಇದೆ ಎಂದರು.

ಕನ್ನಡ ಸಿನಿಮಾ ಶ್ರೀಮಂತ ಪರಂಪರೆ‌ ಹೊಂದಿದೆ, ಸೆನ್ಸಾರ್ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತಾಡುವೆ, ಕನ್ನಡ ಚಲನ ಚಿತ್ರರಂಗ ಇನ್ನು ಚೆನ್ನಾಗಿ ಬೆಳೆಯಬೇಕು ಎಂಬುದೇ ನನ್ನ ಆಸೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌

ಈ ವೇಳೆ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ, ಚಿತ್ರದ ನಾಯಕ ನಟ ಡಾಲಿ ಧನಂಜಯ್, ನಟಿ ರೀಷ್ಮಾ ನಾಣಯ್ಯ, ಚಿತ್ರದ ನಿರ್ದೇಶಕರಾದ ಶಂಕರ್‌ ಗುರು, ಸಹ ನಿರ್ಮಾಪಕರಾದ ಸತ್ಯ ರಾಯಲ್, Z studiosನ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ‌

Related Articles

Back to top button