Kannada NewsKarnataka NewsLatest

ಕೋವಿಡ್ -19 ಕೇರ್ ಸೆಂಟರ್ ಗೆ ಜೊಲ್ಲೆ ದಂಪತಿ ಭೇಟಿ

  ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ –  ಪಟ್ಟಣದ ಹೊರವಲಯದಲ್ಲಿ ಗವಾನ ಗ್ರಾಮಕ್ಕೆ ಕೊವಿಡ್-೧೯ ಮುನ್ನಚ್ಚರಿಕೆ ಕ್ರಮವಾಗಿ ನಿರ್ಮಿಸಲಾದ ೫೦ ಹಾಸಿಗೆಗಳ ಕೊವಿಡ್ ಸೆಂಟರ್ ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಜನತೆಯ ಆರೋಗ್ಯದ ಕುರಿತು ಮುನ್ನಚ್ಚರಿಕೆ ವಹಿಸುವುದು ನನ್ನ ಆದ್ಯ ಕರ್ತವ್ಯ.  ಭಯಂಕರ ರೋಗವೊಂದು ಇಡೀ ಸಮಾಜವನ್ನು ಅಲ್ಲೋಲ ಕಲ್ಲೋಲವಾಗಿಸುತ್ತಿರುವ ಈ ಸಮಯದಲ್ಲಿ ಪ್ರಜೆಗಳ ಹಿತಾಸಕ್ತಿ ಕಾಯುವ ಮಹತ್ತರ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತೆನೆಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಗಾಯಕವಾಡ, ಪೌರಾಯುಕ್ತ ಮಹಾವೀರ ಬೋರಣ್ಣವರ, ತಾಲೂಕ ವೈಧ್ಯಾಧಿಕಾರಿ ಡಾ ವಿಠ್ಠಲ ಶಿಂಧೆ, ಡಾ ಸೀಮಾ ಗುಂಜ್ಯಾಳೆ, ಸಿಪಿಐ ಸಂತೋಷ ಸತ್ಯನಾಯಿಕ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Related Articles

Back to top button