Kannada NewsLatest

ಸುವರ್ಣವಿಧಾನ ಸೌಧದ ಆವಾರದಲ್ಲಿ ಶಾವಿಗೆ, ಹಪ್ಪಳ, ಸಂಡಿಗೆ !

ಕನ್ನಡಿಗರ ಸ್ವಾಭಿಮಾನ ಕೆಣಕುವ ಈ ಫೋಟೋ ಈಗ ವೈರಲ್ ಆಗಿದೆ.

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು 400 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಬೆಳಗಾವಿ ಸುವರ್ಣ ವಿಧಾನಸೌಧದ ಹೊರ ಆವರಣದಲ್ಲಿ ಶಾವಿಗೆ, ಹಪ್ಪಳ, ಸಂಡಿಗೆ ಒಣ ಹಾಕಲಾಗಿರುವ ಫೋಟೋವೊಂದು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕರ್ನಾಟಕದ ಶಕ್ತಿ ಕೇಂದ್ರ, ಆಡಳಿತ ಸೌಧವೊಂದು ಸದ್ಭಳಕೆಯಿಲ್ಲದೆ ಬಿಕೋ ಎನ್ನುತ್ತಿರುವ ಕುರಿತು ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿದ್ದವು. ಯಾವ ಉದ್ದೇಶಕ್ಕೆಂದು ಸುವ್ರಣ ವಿಧಾನ ಸೌಧ ನಿರ್ಮಿಸಲಾಗಿದೆಯೋ ಅದು ಈಡೇರುತ್ತಿಲ್ಲ ಎನ್ನುವ ಅಸಮಾಧಾನ ಕನ್ನಡಿಗರಿಲ್ಲಿದೆ.

ಲೋಕೋಪಯೋಗಿ ಇಲಾಖೆ ಸುವರ್ಣ ವಿಧಾನ ಸೌಧದ ನಿರ್ವಹಣೆ ಹೊಣೆ ಹೊತ್ತಿದೆ. ಸುವರ್ಣ ವಿಧಾನಸೌಧದ ಗೇಟ್ ಕಾಯಲು ದಿನದ 24 ಗಂಟೆಯೂ ಪೊಲೀಸರಿರುತ್ತಾರೆ. ಆದರೆ ಇದೀಗ ಸುವರ್ಣ ವಿಧಾನಸೌಧದ ಹೊರಗೆ ಶಾವಿಗೆ ಮತ್ತು ಹಪ್ಪಳ ಸಂಡಿಗೆ ಒಣ ಹಾಕಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಯಾರು ಆ ರೀತಿ ಒಣ ಹಾಕಿರುವುದು? ಭದ್ರತೆಯ ನಡುವೆ ಅದಕ್ಕೆ ಹೇಗೆ ಅವಕಾಶವಾಯಿತು ಎನ್ನುವ ಪ್ರಶ್ನೆ ಮೂಡಿದೆ.

Home add -Advt

ಬೆಳಗಾವಿ ಶಕ್ತಿ ಕೇಂದ್ರವನ್ನು ಸಂಡಿಗೆ ಕೇಂದ್ರ ಮಾಡಿದ ರಾಜ್ಯ ಸರ್ಕಾರ.. ಶೀಘ್ರದಲ್ಲೇ ಸರ್ಕಾರ ಸಂಡಿಗೆ ಮೇಳ ನಡೆಸಲಿದೆ ಎಂದು ಗಜೇಂದ್ರ ಪಾಟೀಲ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡಿಗರ ಸ್ವಾಭಿಮಾನ ಕೆಣಕುವ ಈ ಫೋಟೋ ಈಗ ವೈರಲ್ ಆಗಿದೆ.

100 KAS ಅಧಿಕಾರಿಗಳಿಗೆ ಪ್ರಮೋಶನ್

 

Related Articles

Back to top button