Latest

ಪ್ಯಾಂಟ್ ಜಿಪ್ ಹಾಕದಿರುವುದು ಗರ್ಲ್ ಪವರ್ ಅಂತೆ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Related Articles

ಇತ್ತೀಚಿಗಷ್ಟೆ ಬಿಡುಗಡೆಯಾದ ಬಾಲಿವುಡ್ ನ ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ  ನಟ ಅಜಯ್ ದೇವಗನ್ ಜೊತೆ ನಟಿಸಿ, ಉತ್ತಮ ಪ್ರತಿಕ್ರಿಯೆ ಪಡೆದಿದ್ದ ತೆಲಗು ಚಿತ್ರರಂಗದ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಈಗ ವಿಚಿತ್ರ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದಾರೆ.

Home add -Advt

ರಾಕುಲ್ ಪ್ರೀತ್ ಸಿಂಗ್ ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಸಿನಿಮಾ ವಿಚಾರಗಳಿಗಿಂತ  ಹೆಚ್ಚು ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. 

ಇತ್ತೀಚಿಗೆ ರಾಕುಲ್ ಪ್ರೀತ್ ಸಿಂಗ್ ಮಾಡಿರುವ ಒಂದು ಫೋಟೋ  ಶೂಟ್ ನಲ್ಲಿ  ಸಖತ್ ಬೋಲ್ಡ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.   ಫೋಟೋಗೆ ಬೇರೆ ಬೇರೆರೀತಿಯ ಪೋಸ್ ನೀಡಿರುವ ರಾಕುಲ್ ಪ್ಯಾಂಟ್ ಗೆ ಜಿಪ್ ಹಾಕದೆ ಹಾಗೆ ಒಂದು ಪೋಸ್ ನೀಡಿದ್ದಾರೆ.  ಈ ಫೋಟೋ ಈಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ರಾಕುಲ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದರ ಜೊತೆಗೆ ಗರ್ಲ್ ಪವರ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

ಈ ಫೋಟೋ ನೋಡಿ ಅನೇಕ ನೆಟ್ಟಿಗರು “ಜಿನ್ಸ್ ಪ್ಯಾಂಟ್ ಜಿಪ್ ಓಪನ್  ಮಾಡೋದು ಇದ್ಯಾವ ಗರ್ಲ್ ಪವರ್,   ಶೇಮ್ ಶೇಮ್” ಎಂದು ಕಮೆಂಟ್ ಮಾಡಿದ್ದಾರೆ.    ರಾಕುಲ್ ಇನ್ಸ್ಟಾಗ್ರಾಮ್ ನಲ್ಲಿ ನೂರಾರು ಕಮೆಂಟ್ ಗಳು ರಾರಾಜಿಸುತ್ತಿವೆ. ಆದ್ರೆ ಇದ್ಯಾವದಕ್ಕು ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಾಕುಲ್.

Related Articles

Back to top button