Belagavi NewsBelgaum NewsKannada NewsKarnataka NewsNationalPolitics

ಕಾಂಗ್ರೆಸ್ ಸರಕಾರ ಇರುವವರೆಗೂ ಸಿದ್ದರಾಮಯ್ಯರವರೇ ಸಿಎಂ: ಆರ್.ವಿ. ದೇಶಪಾಂಡೆ

ಪ್ರಗತಿವಾಹಿನಿ ಸುದ್ದಿ ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವವರೆಗೂ ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಸಿಎಂ ಆಕಾಂಕ್ಷಿ ಅಲ್ಲವೇ ಅಲ್ಲ. ಸಿಎಂ‌ ಸಿದ್ದರಾಮಯ್ಯನವರೇ ಐದು ವರ್ಷ ಅಧಿಕಾರ ನಡೆಸುತ್ತಾರೆ ಎಂದರು.

ನಾನು ಸೀನಿಯರ್ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆಯ ಪ್ರಶ್ನೆಗೆ ಉತ್ತರಿಸಿದ ಅವರು,  ನಾವು ಅಧಿಕಾರಕ್ಕೆ ಬಂದು ವರ್ಷ ಆಗಿದೆ,ನಮಗೆ ಇನ್ನೂ ನಾಲ್ಕು ವರ್ಷ ಇದೆ. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾರೆ. ಹೀಗಾಗಿದ್ದಾಗ ನಾವು ಸಿಎಂ‌ ಬದಲಾವಣೆ ಬಗ್ಗೆ ಮಾತನಾಡೋದು ತಪ್ಪಾಗುತ್ತೆ ಎಂದರು.

ಸಿದ್ದರಾಮಯ್ಯ ಬದಲಾವಣೆ ವಿಚಾರ ನನಗೆ ಕಾಣಿಸುತ್ತಿಲ್ಲ. ಸಿಎಂ ಬದಲಾವಣೆ ಇಲ್ಲ, ಈ ಬಗ್ಗೆ ಹೈಕಮಾಂಡ್ ಕೂಗು ಇಲ್ಲ. ಅನಾವಶ್ಯಕ ಮಾತನಾಡಲಾಗುತ್ತಿದೆ, ಸಿಎಂ ಬದಲಾವಣೆ ಆಗುತ್ತಾರೆ ಎಂದು ಯಾರು ಹೇಳಿದ್ದು ಎಂದು ಪ್ರಶ್ನಿಸಿದರು.

Home add -Advt

Related Articles

Back to top button