Karnataka NewsLatest
ಇಲ್ಲಿಯ ಜನ 23 ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ! : ಅಭಿವೃದ್ಧಿಯ ದೀಪ ಹಚ್ಚಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಬಿ.ಕೆ.ಕಂಗ್ರಾಳಿಯ ಕಲ್ಮೇಶ್ವರ ನಗರ ಈವರೆಗೂ ಶಾಪಗ್ರಸ್ತ ಬಡಾವಣೆಯಂತಿತ್ತು. ಇಲ್ಲಿನ ಜನರೇ ಹೇಳುವ ಪ್ರಕಾರ ಕಳೆದ 23 ವರ್ಷಗಳಿಂದ ಯಾವೊಂದು ಅಭಿವೃದ್ಧಿ ಕೆಲಸಗಳೂ ಇಲ್ಲಿ ಆಗಿಲ್ಲ. ಇಲ್ಲಿನ ಅನೇಕ ಯುವಕರು ತಮ್ಮ ಪ್ರದೇಶದಲ್ಲಿ ಸರಕಾರದ ಯಾವುದೇ ಯೋಜನೆ ಬಂದಿದ್ದನ್ನೇ ನೋಡಿಲ್ಲವಂತೆ.

ಇದೀಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಲ್ಲಿನ ರಸ್ತೆ ಹಾಗೂ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದರು. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತೇನೆ. ಜನರು ಭ್ರಮನಿರಸನಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಆಶಿರ್ವಾದ ಇದ್ದರೆ ಬಡಾವಣೆಯನ್ನು ಮಾದರಿಯನ್ನಾಗಿ ಪರಿವರ್ತಿಸಲೂ ಸಿದ್ದನಿದ್ದೇನೆ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
