Kannada NewsKarnataka News
ಮಗಳ ಸೋಬಾನ ಸಂಭ್ರಮದಲ್ಲಿದ್ದ ತಾಯಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ನೇಸರಗಿ – ಸಂಭ್ರಮದಿಂದ ಮಗಳ ಸೋಬಾನ ಕಾರ್ಯಕ್ರಮ ಸಾಯಂಕಾಲ ಮಾಡಬೇಕೆಂಬ ತವಕದಲ್ಲಿದ್ದ ತಾಯಿ ದುರ್ಮರಣಕ್ಕಿೀಡಾಗಿದ್ದಾರೆ.
ಮೇಕಲಮರಡಿ ಗ್ರಾಮದ ಶಭಾನಾ ಅಬ್ದುಲರಹೀಮ್ ಶಾಬಾಯಿ (43) ಮಗಳ ಸೋಬಾನ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಳು. ಸಂಜೆ ಸೋಬಾನ ನಡೆಯುವುದಿತ್ತು. ಮಧ್ಯಾಹ್ನ ಮೇವು ತರಲು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿತ್ತು.
ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾಳೆ.
ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




