
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇವಸ್ಥಾನ ಜಾಗ ಕಬಳಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಪುರ್ವ ತಾಲೂಕು ತಹಶಿಲ್ದಾರ್ ಅಜಿತ್ ಕುಮಾರ್ ಅವರಿಗೆ 25,000 ರೂ ದಂಡ ವಿಧಿಸಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದೆ.
ಬಿದರಹಳ್ಳಿ ಹೋಬಳಿಯ ಬೆಳತ್ತೂರು ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯದ ಸರ್ವೆ ನಂ.57ರಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 2ಎಕರೆ 26 ಗುಂಟೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ ಐಷಾರಾಮಿ ಬಂಗಲೆ, ವಿಲ್ಲಾ, ಜಿಮ್, ಕ್ಲಬ್, ಈಜುಕೊಳ ಸೇರಿದಂತೆ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಈ ವೇಳೆ ಬಾಳಪ್ಪ ಹಂದಿಗುಂದ ತಹಶಿಲ್ದಾರ್ ಆಗಿದ್ದರು. ಜಿಲ್ಲಾಧಿಕಾರಿಗಳ ಮೂಲಕ ನೋಟೀಸ್ ನೀಡಲಾಗಿತ್ತು. ವರದಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಕೂಡ ತಹಶಿಲ್ದಾರ್ ಅಜಿತ್ ಕುಮಾರ್ ವರದಿ ಸಲ್ಲಿಸಿಲ್ಲ. ಅಲ್ಲದೇ ಮೂರು ಬಾರಿ ನೋಟೀಸ್ ನೀಡಿದರೂ ನ್ಯಾಯಾಲಯಕ್ಕೆ ಅಜಿತ್ ಕುಮಾರ್ ಹಾಜರಾಗಿಲ್ಲ. ಒತ್ತುವರಿದಾರರ ಜೊತೆ ಅಜಿತ್ ಕುಮಾರ್ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ನ್ಯಾಯಾಲಯ ಜಾಮೀನು ಸಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ