Latest

ರಾಜ್ಯ ಮಾಹಿತಿ ಹಕ್ಕು ಅಯೋಗದಿಂದ ತಹಸೀಲ್ದಾರ್ ಗೆ ದಂಡ

ಪ್ರಗತಿವಾಹಿನಿ ಸುದ್ದಿ, ಮೈಸೂರು:  ತಾಲೂಕಿನ ತಹಶೀಲ್ದಾರ್ ಗೆ ರಾಜ್ಯ ಮಾಹಿತಿ ಹಕ್ಕು ಅಯೋಗ  15 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

ಕಂದಾಯ ಇಲಾಖೆ ಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕೊಪ್ಪ ಪಂಚಾಯಿತಿಯ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಹಶೀಲ್ದಾರರ ಮೂಲಕ ಪಡೆಯಬೇಕಾಗಿದ್ದ ದಾಖಲೆಗಾಗಿ ಮಾಹಿತಿ ಹಕ್ಕು ಕಾಯಿದೆಯಡಿ ಮಂಗಳೂರು ಮಂಗಳಾ ದೇವಿಯ ಮಿಷನ್ ಕಂಪೌಂಡ್ ನ ನಿವಾಸಿ ಮೊಹಮ್ಮದ್ ಝಮೀರ್ 2021ರಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿದಾರರಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪಿರಿಯಾಪಟ್ಟಣ ದ ತಹಶೀಲ್ದಾರ್ ಚಂದ್ರಮೌಳಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿಲ್ಲ. ಮತ್ತು ತಪ್ಪು ಹಿಂಬರಹವನ್ನು ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಎರಡು ತಿಂಗಳ ಸಂಬಳದಿಂದ 15 ಸಾವಿರ ರೂ. (ನವೆಂಬರ್ ಮತ್ತು ಡಿಸೆಂಬರ್ 2022ರಲ್ಲಿ )ಯನ್ನು ರಾಜ್ಯ ಮಾಹಿತಿ ಹಕ್ಕು ಅಯೋಗಕ್ಕೆ ದಂಡ ಪಾವತಿಸಲು ಆದೇಶಿಸಿದೆ. 

ಮೇಲ್ಮನವಿದಾರರಿಗೆ 30 ದಿನಗಳ ಒಳಗೆ ಮಾಹಿತಿಯನ್ನು ಒದಗಿಸಿ ಸ್ವೀಕೃತಿ ಯನ್ನು ದೃಢೀಕರಿಸಿ, ಅದರ ಅನುಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪಿರಿಯಾಪಟ್ಟಣ ತಹಶೀಲ್ದಾರ್ ಚಂದ್ರಮೌಳಿಯವರಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಆದೇಶಿಸಿದ್ದಾರೆ.

ತಾಯಿ- ಶಿಶು ಮರಣ ಪ್ರಮಾಣ ತಗ್ಗಿಸಲು ನಿಯಮಾವಳಿ ನಿರೂಪಣೆಗೆ ಕ್ರಮ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button