Latest

ಚಾಕುವಿನಿಂದ ಇರಿದು ತಹಸೀಲ್ದಾರ್ ಮರ್ಡರ್

ಪ್ರಗತಿವಾಹಿನಿ ಸುದ್ದಿ, ಕೋಲಾರ – ಭೂ ವಿವಾದಕ್ಕೆ ಸಂಬಧಿಸಿದಂತೆ ನಡೆದ ಘರ್ಷಣೆ ವೇಳೆ ತಹಸಿಲ್ದಾರ ಒಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಸಿಲ್ದಾರ ಚಂದ್ರಮೌಳೇಶ್ವರ ಕೊಲೆಯಾದವರು. ತಾಲೂಕಿನ ತೋಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿವೃತ್ತ ಶಿಕ್ಷಕ ವೆಂಕಟಪತಿ ಎನ್ನುವವರು ಹತ್ಯೆಗೈದ ಆರೋಪಿ.

ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಪತಿ ಎನ್ನುವವರ ಮಧ್ಯೆ ಭೂ ವಿವಾದವಿತ್ತು. ಈ ಸಂಬಂಧ ಸರ್ವೆ ನಡೆಸುವ ವೇಳೆ ಅಡ್ಡಿಪಡಿಸಿದ ವೆಂಕಟಪತಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ. ನಂತರ ತಹಸಿಲ್ದಾರರು ವಾಹನ ಹತ್ತಿ ಹೊರಡುವ ವೇಳೆ ಕಾಗದಪತ್ರ ತೋರಿಸುವ ನೆಪದಲ್ಲಿ ಹತ್ತಿರ ಹೋಗಿ ಅಡಗಿಸಿಟ್ಟುಕೊಂಡಿದ್ದ ಚಾಕು ತೆಗೆದು ಇರಿದು ಪರಾರಿಯಾಗಿದ್ದಾನೆ.

ತಕ್ಷಣ ತಹಸಿಲ್ದಾರರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕಲಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಹುಡುಕಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button