Latest

ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಜೀವನದಿ ಕಾವೇರಿಯ ತೀರ್ಥೋದ್ಭವವಾಗಿದ್ದು, ತೀರ್ಥರೂಪಿಣಿಯಾಗಿ ಕಾವೇರಿ ಮಾತೆ ಭಕ್ತ ಸಾಗರಕ್ಕೆ ದರ್ಶನ ನೀಡಿದ್ದಾಳೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಮಧ್ಯಾಹ್ನ 1:11ರ ಮಕರ ಲಗ್ನದಲ್ಲಿ ಕಾವೇರಿ ನದಿ ತೀರ್ಥರೂಪಿಣಿಯಾಗಿ ಉದ್ಭವಿಸಿದಳು. ತೀರ್ಥೋದ್ಭವವಾಗುತ್ತಿದ್ದಂತೆ ನೆರೆದ ಭಕ್ತ ಸಾಗರ ಜೈಕಾರ ಕೂಗಿ ಭಕ್ತಿ ಭಾವದಿಂದ ತನ್ಮಯತೆ ಮೆರೆದರು. 6 ಅರ್ಚಕರಿಂದ ವಿಷೇಶ ಪೂಜೆ, ಧಾರ್ಮಿಕ ಕೈಂಕರ್ಯಗಳು ನಡೆದವು.

ಸೂರ್ಯ ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಕಾವೇರಿ ತೀರ್ಥೋದ್ಭವ ಸಂಭವಿಸುತ್ತದೆ ಎಂಬುದು ಪ್ರತೀಥಿ.

ಇನ್ನು ಇಂದಿನಿಂದ ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರೋತ್ಸವ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತೀರ್ಥೋದ್ಭವದ ಸಂದರ್ಭದಲ್ಲಿ ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡಲು ಅವಕಾಶವಿಲ್ಲ.

Home add -Advt

ಇಂದು ಚಿನ್ನ, ಬೆಳ್ಳಿ ದರ ಹೇಗಿದೆ ಗೊತ್ತೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button