Latest

6ನೇ ತರಗತಿವರೆಗಷ್ಟೇ ವಿದ್ಯಾರ್ಥಿನಿಯರಿಗೆ ಅವಕಾಶ; ಶಾಕ್ ನೀಡಿದ ತಾಲಿಬಾನ್ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ಕಾಬೂಲ್; ಅಪ್ಘಾನಿಸ್ಥಾನವನ್ನು ತನ್ನ ವಶಕ್ಕೆ ಪಡೆದಿರುವ ತಾಲಿಬಾನ್ ಸರ್ಕಾರ ಬರೋಬ್ಬರಿ 7 ತಿಂಗಳ ಬಳಿಕ ಶಾಲೆಗಳನ್ನು ತೆರೆದಿದೆ. ಆದರೆ ವಿದ್ಯಾರ್ಥಿನಿಯರಿಗೆ ಬಿಗ್ ಶಾಕ್ ನೀಡಿದೆ.

ಅಪ್ಘಾನಿಸ್ಥಾನದಲ್ಲಿ ವಿದ್ಯಾರ್ಥಿನಿಯರಿಗೆ ಕೇವಲ 6ನೇ ತರಗತಿವರೆಗೆ ಮಾತ್ರ ಓದಲು ಅವಕಶವಿದೆ ಎಂದು ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿನಿಯರು ಹೈಸ್ಕೂಲು ಪ್ರವೇಶಕ್ಕೆ ಅವಕಾಶವಿಲ್ಲ. ಇಂತಹ ಆದೇಶ ಹೊರಡಿಸುವ ಮೂಲಕ ಹೆಣ್ಣುಮಕ್ಕಳ ವಿದ್ಯಾಭ್ಯಸದ ಕನಸಿಗೆ ತಣ್ಣಿರೆರಚಿದೆ.

ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಾಗಿನಿಂದ ವಿಚಿತ್ರ ಕಾನೂನು ಜಾರಿಗೆ ತರಲಾಗಿದ್ದು, ಶಾಲೆಗಳಲ್ಲಿ ಕೋ ಎಜುಕೇಷನ್ ನಿರ್ಬಂಧಿಸಲಾಗಿದೆ. ಇಸ್ಲಾಮಿಕ್ ಕಾನೂನಿನಡಿಯಲ್ಲಿಯೇ ಶಾಲೆಗಳು ರಚನೆಯಾಗಬೇಕು ಎಂದು ಸೂಚಿಸಲಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶ ನೀಡುವುದಾಗಿ ಹೇಳಿಕೆ ನೀಡಿದ್ದ ತಾಲಿಬಾನ್ ಸರ್ಕಾರ ಇದೀಗ ಉಲ್ಟಾಹೊಡೆದಿದೆ.
ಹಿಜಾಬ್: ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button