
ಪ್ರಗತಿವಾಹಿನಿ ಸುದ್ದಿ; ಚೆನ್ನೈ: 22 ವರ್ಷದ ಯುವಕನೋರ್ವ 11 ಯುವತಿಯರನ್ನು ಮುದುವೆಯಾಗಿ ವಂಚಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಲವ್ಲಿ ಗಣೇಶ್ ಎಂಬ ಯುವಕ ಫೇಸ್ ಬುಕ್ ಮೂಲಕ ಮಹಿಳೆಯರನ್ನು ಹಾಗೂ ಹದಿಹರೆಯದ ಯುವತಿಯರನ್ನು ಪರಿಚಯಿಸಿಕೊಂಡು ವಿವಾಹವಾಗುವುದನ್ನೇ ಕಾಯಿಲೆಯನ್ನಾಗಿ ಮಾಡಿಕೊಂಡಿದ್ದಾನೆ. ಹೀಗೆ ಬರೋಬ್ಬರಿ 11 ಯುವತಿಯರನ್ನು ವಿವಾಹವಾಗಿದ್ದಾನೆ.
2017ರಲ್ಲಿ ಫೇಸ್ ಬುಕ್ ನಲ್ಲಿ ಪರಿಚಯಳಾದ ಯುವತಿಯನ್ನು ವರಿಸಿದ್ದ ಲವ್ಲಿ ಗಣೇಶ್ ಆಕೆಯನ್ನು ಪ್ರತ್ಯೇಕವಾಗಿ ಇರಿಸಿದ್ದ. ಆಕೆ ವಯಸ್ಕಳಾದ ಕಾರಣ ಆತನೊಂದಿಗೆ ಜೀವನ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಬಳಿಕ 17 ವರ್ಷದ ಬಾಲಕಿಯನ್ನು ವಿವಾಹವಾಗಿ ಮನೆಗೆ ಕರೆತಂದಿದ್ದ. ಆದರೆ ಆಕೆಯನ್ನು ಮನೆ ಕೆಲಸದವಳೆಂದು ಪತ್ನಿಗೆ ಹೇಳಿದ್ದ. ಕೆಲ ದಿನಗಳ ಬಳಿಕ ವಿಷಯ ತಿಳಿದ ಪತ್ನಿ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಪತ್ನಿಗೆ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದ. ಸಂತ್ರಸ್ತೆ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಳು.
ಲವ್ಲಿ ಗಣೇಶ್ ವಿರುದ್ಧ ತನಿಖೆ ನಡೆಸಿದಾಗ ಈವರೆಗೆ ಆತ ಬರೋಬ್ಬರಿ 11 ಹುಡುಗಿಯರನ್ನು ವಿವಾಹವಾಗಿದ್ದಾಗಿ ತಿಳಿದುಬಂದಿದೆ.