ಪ್ರಗತಿವಾಹಿನಿ ಸುದ್ದಿ; ತಿರುಪತ್ತೂರ್: ವಾಹನ ಕೆಟ್ಟುನಿಂತ ಕಾರಣ ರಸ್ತೆಬದಿ ಕುಳಿತಿದ್ದವರ ಮೇಲೆ ಸರಕು ಸಾರಿಗೆ ವಾಹನ ಹರಿದು 7 ಜನರು ಸಾವನ್ನಪ್ಪಿರುವ ಘೋರ ಘಟನೆತಮಿಳುನಾಡಿನ ತಿರುಪತ್ತೂರ್ ನಲ್ಲಿ ಸಂಭವಿಸಿದೆ.
ದೂರದೂರಿಗೆ ತೆರಳುತ್ತಿದ್ದವರು ತಮ್ಮ ವಾಹನದಲ್ಲಿ ಸಮಸ್ಯೆಯಾಗಿದ್ದರಿಂದ ರಿಪೇರಿಯಾಗುವವರೆಗೆ ರಸ್ತೆಬದಿ ಕುಳಿತುಕೊಂಡಿದ್ದರು. ಈ ವೇಳೆ ಸರಕು ಸಾಗಣೆ ವಾಹನವೊಂದು ಬರುತ್ತಿತ್ತು. ಆ ವಾಹನಕ್ಕೆ ಲಾರಿಯೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಬದಿ ಕುಳಿತಿದ್ದ ಜನರ ಮೇಲೆ ಸರಕು ಸಾಗಣೆ ವಾಹನ ಹರಿದು ಹೋಗಿದೆ.
ಸ್ಥಳದಲ್ಲೇ 7 ಜನರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ