ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೋರ್ವರು ಕೇವಲ ಒಂದೇ ಒಂದು ವೋಟ್ ಪಡೆದು ಶಾಕ್ ಆದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದ್ದು, ಈರೋಡ್ ಜಿಲ್ಲೆಯ ಭವಾನಿಸಾಗರ್ ಪಟ್ಟಣದ 11ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ನರೇಂದ್ರನ್ ಅವರು ಮತ ಎಣಿಕೆ ಬಳಿಕ ಬಂದ ಫಲಿತಾಂಶ ಕಂಡು ಅಕ್ಷರಶ: ಶಾಕ್ ಆಗಿದ್ದಾರೆ. ತಮಗೆ ತಾವೇ ಹಾಕಿಕೊಂಡ ಕೇವಲ ಒಂದೇ ಒಂದು ಮತ ಮಾತ್ರ ಪಡೆದಿದ್ದಾರೆ.
ತಮ್ಮ ಮತ ಮಾತ್ರ ತಮಗೆ ಸಿಕ್ಕಿದ್ದು, ಕುಟುಂಬ ಸದಸ್ಯರು ಕೂಡ ತಮಗೆ ಮತಚಲಾಯಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ನನಗೆ ಅವಮಾನವೆನಿಸುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುಳ್ಳು ಭರವಸೆಗಳನ್ನು ಕೊಟ್ಟು ನನ್ನನ್ನು ಚುನಾವಣೆಗೆ ನಿಲ್ಲಿಸಿದರು. ಈಗ ನೋಡಿದರೆ ನನಗೆ ನಾನೊಬ್ಬನೆ ಹಾಕಿಕೊಂಡ ಮತ ಮಾತ್ರ ಬಿದ್ದಿದೆ. ನನ್ನ ಕುಟುಂಬದವರಾಗಲಿ, ಸ್ನೇಹಿತರಾಗಲಿ ಯಾರೊಬ್ಬರೂ ನನಗೆ ವೋಟ್ ಮಾಡಿಲ್ಲ ಎಂದು ನೊಂದುಕೊಂಡಿದ್ದಾರೆ.
ಇನ್ನು ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಕೂಡ ಆಡಳಿತ ಪಕ್ಷ ಡಿಎಂಕೆ ಜಯಭೇರಿ ಭಾರಿಸಿದ್ದು, ಚೆನ್ನೈನಲ್ಲಿಯೇ 134 ವಾರ್ಡ್ ಗಳನ್ನು ಗೆದ್ದುಕೊಂಡಿದೆ.
ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳ; ಯಾರ ಸಂಬಳ ಎಷ್ಟು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ