ಚೆನ್ನೈ: ತಮಿಳುನಾಡಿನ ಮಾಜಿ ಸಚಿವರಿಬ್ಬರ ನಿವಾಸಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಸಿ, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ತಮಿಳುನಾಡಿನ ಮಾಜಿ ಸಚಿವರಾದ ಎಸ್ ಪಿ ವೇಲುಮಣಿ ಹಾಗೂ ಸಿ.ವಿಜಯಭಾಸ್ಕರ್ ಅವರ ಚೆನ್ನೈ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸ್ ಪಿ ವೇಲುಮಣಿ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2015 ಹಾಗೂ 2018ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಲೆಡ್ ಲೈಟ್ ಗಳೊಂದಿಗೆ ಬದಲಾಯಿಸಲು ಕರೆದಿದ್ದ ಟೆಂಡರ್ ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ವೇಲುಮಣಿ ಹಾಗು ಸಿ.ವಿಜಯಭಾಸ್ಕರ್ ಇಬ್ಬರೂ ತಮ್ಮದೇ ಮುಚ್ಚಿದ ಕಂಪನಿಗಳಿಗೆ ಟೆಂಡರ್ ನೀಡಿ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ನಷ್ಟವುಂಟುಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಿಟ್ಟಿನಲ್ಲಿ ದಾಳಿ ನಡೆದಿದೆ.
ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ…?
https://pragati.taskdun.com/latest/mysore-open-univercityvamacharahod-tejaswi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ