Latest

ಪೆನ್ನಲ್ಲೇ ಶಿಶುವಿನ ಕರುಳು ಬಳ್ಳಿ ಕತ್ತರಿಸಿದ್ದಳಂತೆ ಶಾಲೆಯಲ್ಲಿ ಮಗು ಹೆತ್ತು ಪೊದೆಯಲ್ಲಿ ಎಸೆದಿದ್ದ ಬಾಲಕಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಿಂದ ಮಗು ಪಡೆದು ಶಾಲೆಯಲ್ಲೇ ಹೆರಿಗೆಯಾಗಿ ನವಜಾತ ಶಿಶುವನ್ನು ಪೊದೆಯಲ್ಲಿ ಎಸೆದು ಹೋಗಿದ್ದ ತಮಿಳುನಾಡಿನ ಕಡಲೂರಿನ ಬಾಲಕಿ ತನ್ನ ಹೆರಿಗೆ ತಾನೇ ಮಾಡಿಕೊಂಡಿದ್ದಳು ಎಂಬ ವಿಷಯ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

11ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಬಾಲಕಿ ತನಗಿಂತ ಒಂದು ವರ್ಷ ಕಿರಿಯ ವಿದ್ಯಾರ್ಥಿಯಿಂದ ಗರ್ಭಿಣಿಯಾಗಿದ್ದಳು. ಈಕೆಗೆ ಶಾಲೆಯಲ್ಲಿದ್ದಾಗಲೇ ಹೆರಿಗೆ ನೋವು ಆರಂಭವಾಗಿದೆ. ಈ ವೇಳೆ ವಿದ್ಯಾರ್ಥಿನಿ ಶಾಲಾ ಶೌಚಾಲಯಕ್ಕೆ ಹೋಗಿದ್ದಾಳೆ.

ಹುಡುಗಿಯು ಸ್ವತಃ ಪೆನ್ನು ಬಳಸಿ ಹೊಕ್ಕುಳಬಳ್ಳಿಯನ್ನು ಕತ್ತರಿಸಿ ಮತ್ತೆ ತರಗತಿಗೆ ಬಂದಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿಯನ್ನು ಗರ್ಭಿಣಿಯನ್ನಾಗಿಸಿದ ವಿದ್ಯಾರ್ಥಿಯನ್ನು ಈಗಾಗಲೇ ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದು ಈ ಘಟನೆಯ ವಿಚಾರಣೆ ಮುಂದುವರಿದಿದೆ.

Home add -Advt

ಮಗು ಹೆತ್ತು ಶಾಲೆ ಬಳಿಯ ಪೊದೆಯಲ್ಲಿ ಬಿಟ್ಟು ಹೋದ 16 ವರ್ಷದ ವಿದ್ಯಾರ್ಥಿನಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button