ಪ್ರಗತಿವಾಹಿನಿ ಸುದ್ದಿ: ಫೆಂಗಲ್ ಚಂಡಮಾರುತ ತಮಿಳುನಾಡಿನಲ್ಲಿ ಪ್ರವಾಹ ಸೃಷ್ಟಿಸಿದ್ದು, ಭಾರಿ ಮಳೆ, ಭೂಕುಸಿತದಿಂದಾಗಿ ಜನರು ತತ್ತರಿಸಿದ್ದಾರೆ. ಹಲವು ಕುಟುಂಬಗಳು ನಿರಾಶ್ರಿತವಾಗಿವೆ.
ಅದರಲ್ಲಿಯೂ ತಮಿಳುನಾಡಿನ ಕೃಷ್ಣಗಿರಿಜಿಲ್ಲೆಯಲ್ಲಿ ಅಕ್ಷರಶಃ ಜಲಪ್ರಳಯವುಂಟಾಗಿದೆ. ರಸ್ತೆಗಳಲ್ಲಿ ನೀರು ಬೋರ್ಗರೆದು ಉಕ್ಕಿ ಹರಿಯುತ್ತಿದ್ದು, ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿವೆ.
ರಸ್ತೆಬದಿ ನಿಲ್ಲಿಸಿದ್ದ ಬಸ್ ಗಳು, ಟಿಟಿ ವಾಹನಗಳು, ಟ್ಯಾಂಕರ್ ಗಳು, ಕಾರುಗಳು ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೀಗಿವೆ. ಹಲವು ಮನೆಗಳು, ಆಸ್ಪತ್ರೆಗಳು, ಕಚೇರಿಗಳಿಗೂ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
ಅಬ್ಬರ ತಮಿಳುನಾಡಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ. ಒಂದೆಡೆ ರಣಮಳೆ ಸುರಿಯುತ್ತಿದ್ದರೆ ಮತ್ತೊಂದೆಡೆ ಭುಕುಸಿತ, ಪ್ರವಾಹಸ್ಥಿತಿ ಎದುರಾಗಿದೆ. ಚಂಡಮಾರುತದ ಹೊಡೆತಕ್ಕೆ ಈವರೆಗೆ ಹಲವರು ಸಾವನ್ನಪ್ಪಿದ್ದಾರೆ. ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ