
ಪ್ರಗತಿವಾಹಿನಿ ಸುದ್ದಿ, ಲಂಡನ್: ಪಂದ್ಯದ ವೇಳೆ ಕಳಚಿಹೋದ ತಮ್ಮ ಕೈ ಕೀಲನ್ನು ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸರಿಪಡಿಸಿಕೊಳ್ಳುತ್ತಿರುವ ವಿಡಿಯೊವೊಂದು ಜಾಲತಾಣಗಳಲ್ಲಿ ಸದ್ದು ಮಾಡತೊಡಗಿದೆ.
ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ರೋಹಿತ್ ಶರ್ಮಾ ಎಡಗೈ ಕೀಲು ಕಳಚಿಹೋಯಿತು. ಆದರೆ ರೋಹಿತ್ ಅದನ್ನು ಕೆಲವೇ ಸೆಕೆಂಡ್ ಗಳಲ್ಲಿ ಯಾವ ಫಿಜಿಯೊಗಳ ನೆರವೂ ಇಲ್ಲದೇ ತಾವೇ ಸರಿಪಡಿಸಿಕೊಂಡರು. ಈ ವೇಳೆ ರೋಹಿತ್ ಶರ್ಮಾ ನಗುತ್ತ ಜಡೇಜಾ ಅವರನ್ನು ನೋಡಿ ನಗುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಈ ಸಂಬಂಧ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಕಮೆಂಟ್ ಗಳು ಬರುತ್ತಿದ್ದು ರೋಹಿತ್ ಅಭಿಮಾನಿಯೊಬ್ಬರು “ರೋಹಿತ್ ಆಟವಾಡುತ್ತ ಆರ್ಥೋಪಿಡಿಕ್ ಪಾಠವನ್ನೂ ಹೇಳುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.