
ಪ್ರಗತಿವಾಹಿನಿ ಸುದ್ದಿ: ಪ್ರೇಮ ವೈಫಲ್ಯಕ್ಕೆ ಯುವಕನೊಬ್ಬ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದೆ.
ಮೈಸೂರಿನ ಅಶೋಕಪುರದಲ್ಲಿ ಈ ಘಟನೆ ನಡೆದಿದೆ. ಪಾಂಡವಪುರ ಮೂಲದ ಪೂರ್ಣಿಮಾ ಮೃತ ಶಿಕ್ಷಕಿ. ಅಭಿಷೇಕ್ ಶಿಕ್ಷಕಿಯನ್ನೇ ಕೊಂದ ಕೊಲೆಗಾರ.
ಪ್ರೀತಿ-ಪ್ರೇಮದ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿದ್ದು, ಯುವಕ ಅಭಿಷೇಕ್ ಶಿಕ್ಷಕಿ ಪೂರ್ಣಿಮಾ ಅವರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಪೂರ್ಣಿಮಾ ಅವರನ್ನು ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಅಭಿಷೇಕ್ ನನ್ನು ಪೊಲೀಸರು ಬಂಧಿಸಿದ್ದಾರೆ.