ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇನ್ನು 2 ದಿನದಲ್ಲಿ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಾಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಕೆಲವು ಶಿಕ್ಷಕರಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಭೋಜೇಗೌಡರು ಹೇಳಿದಂತೆ ಆಯುಕ್ತರು ದೂರವಾಣಿ ಮೂಲಕ ತಿಳಿಸಿದ ವಿಷಯಗಳು –
1. ಇನ್ನು ಎರಡು ದಿನದಲ್ಲಿ ವರ್ಗಾವಣೆ ಮಾರ್ಗಸೂಚಿ ಪ್ರಕಟ
2. ವೇತನ ತಾರತಮ್ಯ ಸಂಬಂಧಿಸಿದ 813 ಶಿಕ್ಷಕರ ಕಡತವನ್ನು ಪರಿಶೀಲನೆ ಮಾಡುತ್ತಿದ್ದು, ಮೇಲ್ಮನವಿ ಸಲ್ಲಿಸಬೇಕೆ ಅಥವಾ ಆದೇಶ ಮಾಡಬೇಕೆ ಎಂಬ ಬಗ್ಗೆ ಕಾರ್ಯದರ್ಶಿ ಮತ್ತು ಆಯುಕ್ತರು ಚರ್ಚೆ ನಡೆಸುತ್ತಿದ್ದು, ಮೂರು ದಿನದ ಒಳಗೆ ಮಾಹಿತಿಯನ್ನು ನೀಡುತ್ತಾರೆ
3. ಗರ್ಭಿಣಿಯರು ಮತ್ತು ಅಂಗವಿಕಲರಿಗೆ ಈಗಾಗಲೇ ಸರ್ಕಾರ ವರ್ಕ್ ಫ್ರಾಮ್ ಹೋಮ್ ಆದೇಶಿಸಿರುವುದರಿಂದ ಅವರಿಗೆ ಶಾಲೆಗೆ ಹೋಗುವುದಕ್ಕೆ ವಿನಾಯಿತಿ ಇದೆ.
4. ಜುಲೈ ಮೊದಲ ವಾರದ ಒಳಗೆ ಎಲ್ಲಾ ಶಿಕ್ಷಕರಿಗೂ ವ್ಯಾಕ್ಸಿನೇಷನ್ ಮಾಡಲಾಗುತ್ತದೆ
5. ಕೋವಿಡ್ ನಿಂದ ಮೃತರಾದ ಶಿಕ್ಷಕರ ಕುಟುಂಬದವರು ಉಪನಿರ್ದೇಶಕರಿಗೆ ಮನವಿ ನೀಡಿ, ವರ್ಕ್ ಫ್ರಾಮ್ ಹೋಮ್ ಕರ್ತವ್ಯ ನಿರ್ವಹಿಸಲು ಅವಕಾಶಕ್ಕೆ ವಿನಂತಿ ಮಾಡಬೇಕು..
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ