ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರ ವಲಯದ ರಾಣಿ ಚನ್ನಮ್ಮನಗರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಹಿರಿಯ ಶಿಕ್ಷಕ ವೀರಭದ್ರಯ್ಯ ಮಲ್ಲಯ್ಯ ಬೇವಿನಕೊಪ್ಪಮಠ ಅವರಿಗೆ ಅಭಿನಂದನಾ ಸಮಾರಂಭವನ್ನು ಗೋವಾವೇಸ್ ನ ಜಕ್ಕೇರಿ ಹೊಂಡದ ಪಕ್ಕದಲ್ಲಿರುವ ಓರಿಯಂಟಲ್ ಹಾಲ್ ನಲ್ಲಿ ಆ.12ರಂದು ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ.
ಬೇವಿನಕೊಪ್ಪಮಠ ಅವರು ಜುಲೈ 31ರಂದು ನಿವೃತ್ತರಾಗಿದ್ದಾರೆ. ಗುರುಸ್ಪಂದನ ಶಿಕ್ಷಕರ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಚನ್ನಮ್ಮನ ಕಿತ್ತೂರಿನ ದೇಶನೂರು ವಿರಕ್ತ ಮಠದ ಕಲ್ಮಠ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಎ.ಬಿ. ಪುಂಡಲೀಕ, ಡಯಟ್ ಉಪನಿರ್ದೇಶಕ (ಅಭಿವೃದ್ಧಿ), ಪ್ರಾಚಾರ್ಯ ಎಸ್.ಡಿ. ಗಾಂಜಿ, ಕ್ಷೇತ್ರ ಸಮನ್ವಯಾಧಿಕಾರಿ ಐ.ಡಿ. ಹಿರೇಮಠ ಭಾಗವಹಿಸುವರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಡಿ. ಗಂಗಣ್ಣವರ, ಬೈಲಹೊಂಗಲ ಘಟಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಬೆಳಗಾವಿ ಗ್ರಾಮೀಣ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಅನ್ವರ್ ಲಂಗೋಟಿ, ಮಾಜಿ ಅಧ್ಯಕ್ಷ ಶೇಖರ ಕರಂಬಳಕರ, ಅಂಜುಮನ್ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಎಚ್. ಐ. ತಿಮ್ಮಾಪುರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ನಗರ ಮಾಜಿ ಅಧ್ಯಕ್ಷ ಎನ್.ಐ. ಹಕ್ಕಿ, ಕಣಬರ್ಗಿ ಕೆಎಚ್ ಪಿಎಸ್ ನಿವೃತ್ತ ಹಿರಿಯ ಪ್ರಧಾನ ಗುರು ಡಿ.ಎಸ್. ಪೂಜೇರ, ಭೀಮಸೇನಾ ರಾಜ್ಯಾಧ್ಯಕ್ಷ ಭರತ ಬಳ್ಳಾರಿ, ಪ್ರಧಾನ ಗುರು ಬಸವರಾಜ ಸುಣಗಾರ, ಮಾಜಿ ನಗರ ಸೇವಕ ರಮೇಶ ಸೊಂಟಕ್ಕಿ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಚನ್ನಮ್ಮನ ಕಿತ್ತೂರು ತಾಲೂಕಾಧ್ಯಕ್ಷ ಎಂ.ಎಸ್. ಕಲ್ಮಠ, ನಿವೃತ್ತ ಮುಖ್ಯ ಅಭಿಯಂತರ ವೀರಯ್ಯಾ ಹಿರೇಮಠ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ