
ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಮಕ್ಕಳಿಗೆ ಪಾಹ ಮಾಡುವುದಾಗಿ ಹೇಳಿ ನಂಬಿಸಿ ಕರೆದೊಯ್ದು ಮಕ್ಕಳ ಗುಪ್ತಾಂಗ ಅಳತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ಅಜರುದ್ದೀನ್ ಬಂಧಿತ ಶಿಕ್ಷಕ. ಪಾಠ ಹೇಳಿಕೊಡುವುದಾಗಿ ವಿದ್ಯಾರ್ಥಿಗಳನ್ನು ಮನೆಗೆ ಕರೆದು, ಮಕ್ಕಳ ಗುಪ್ತಾಂಗವನ್ನು ಕೋಲಿನಿಂದ ಅಳತೆ ಮಾಡಿ ವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದ.
ಕಾಮುಕ ಶಿಕ್ಷಕನ ಕೃತ್ಯ ಬಯಲಾಗುತ್ತಿದ್ದಂತೆ ಸ್ಥಳೀಯರು ಶಿಕ್ಷಕನನ್ನು ಹಿಡಿದು ಧರ್ಮದೇಟು ನೀಡಿದ್ದರು. ಪೊಲಿಸ್ ಠಾಣೆಗೂ ದೂರು ನೀಡಿದ್ದರು. ಬಳಿಕ ಕೊಪ್ಪಳದಿಂದ ಪರಾರಿಯಾಗಿದ್ದ ಶಿಕ್ಷಕ ಗೋವಾದಲ್ಲಿ ತಲೆಮರೆಸಿಕೊಂಡಿದ್ದ.
ಇದೀಗ ಕಾಮುಕ ಶಿಕ್ಷಕ ಅಜರುದ್ದೀನ್ ನನ್ನು ಗೋವಾದಲ್ಲಿ ಕಾರಟಗಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಸಮುದ್ರಕ್ಕೆ ನುಗ್ಗಿದ ಕಾರು; ಓರ್ವ ದುರ್ಮರಣ