Latest

ವರ್ಗಾವಣೆ ಸುದ್ದಿ ಕೇಳಿ ಶಾಕ್; ಶಿಕ್ಷಕ ಸಾವು

ಪ್ರಗತಿವಾಹಿಬಿ ಸುದ್ದಿ; ಹೈದರಾಬಾದ್: ವರ್ಗಾವಣೆಯಾದ ಸುದ್ದಿ ಕೇಳುತ್ತಿದ್ದಂತೆ ಶಿಕ್ಷಕರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಬಾನೋತ್ ಜೆತ್ರಾ (57) ಮೃತ ಶಿಕ್ಷಕ. ಮೆಹಬೂಬಾಬಾದ್ ಜಿಲ್ಲೆಯ ನೆಲ್ಲಿಕುದುರು ಮಂಡಲದ ಚಿನ್ನ ಮುಪ್ಪರಂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಮಗೆ ಈ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆಯಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಶಾಕ್ ಆದ ಶಿಕ್ಷಕ ಚಿಂತಿತರಾಗಿದ್ದರು. ಚಿನ್ನ ಮುಪ್ಪರಂನಿಂದ ಮುಲುಗು ಜಿಲ್ಲೆಯಲ್ಲಿರುವ ಶಾಲೆಗೆ ಪ್ರತಿದಿನ ಪ್ರಯಾಣ ಮಾಡುವುದು ದುಸ್ಥರವಾಗಿತ್ತು. ಇದರಿಂದ ಬೇಸರಗೊಂಡಿದ್ದ ಜೇತ್ರಾ ತಡ ರಾತ್ರಿ ಹೃದಯಾಘಾತಕ್ಕೀಡಾಗಿದ್ದರು. ಕೋಮಾ ಸ್ಥಿತಿಗೆ ಜಾರಿದ್ದ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ವರ್ಷಚರಣೆ : 6 ಗಂಟೆಯಿಂದಲೇ ಕಠಿಣ ನಿರ್ಬಂಧ, ಹುಷಾರ್ ಎಂದ ಗೃಹ ಸಚಿವ

Home add -Advt

Related Articles

Back to top button