Kannada NewsKarnataka NewsLatest

*ಅಶ್ಲೀಲ ಮೆಸೇಜ್ ಕಳುಹಿಸಿ ಶಿಕ್ಷಕಿಯನ್ನು ಮಂಚಕ್ಕೆ ಕರೆದ ಸಹ ಶಿಕ್ಷಕ; ಆರೋಪಿ ಹಿಡಿದು ಧರ್ಮದೇಟು ನೀಡಿದ ಜನರು*

ಪ್ರಗತಿವಾಹಿನಿ ಸುದ್ದಿ: ಅತಿಥಿ ಶಿಕ್ಷಕಿಗೆ ಸಹ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಶಿಕ್ಷಕಿಯ ಸಂಬಂಧಿಕರು ಶಿಕ್ಷಕನನ್ನು ಹಿಡಿದು ಧರ್ಮದೇಟು ನೀಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಹೊರವಲಯದ ಆದರ್ಶ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿದ್ದ ಮೊಹಬೂಬ್ ಅಲಿ ಎಂಬಾತ ಅತಿಥಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಶ್ಲೀಲ ಮೆಸೇಜ್ ಕಳುಹಿಸಿ ಮಂಚಕ್ಕೆ ಕರೆದಿದ್ದ. ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಧಾವಿಸಿದ ಶಿಕ್ಷಕಿ ಕುಟುಂಬದವರು ಹಾಗೂ ಸಂಬಂಧಿಕರು, ಶಿಕ್ಷಕ ಮೆಹಬೂಬ್ ಅಲಿ ಶರ್ಟ್ ಹರಿಯುವಂತೆ ಧರ್ಮದೇಟು ನೀಡಿದ್ದಾರೆ.

Home add -Advt

ಶಿಕ್ಷಕಿಯ ಕಾಲಿಗೆ ಬಿದ್ದು ಆರೋಪಿ ಕ್ಷಮೆಯಾಚಿಸಿದ್ದಾನೆ. ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾನೆ. ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದರಿಂದ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಶಿಕ್ಷಕ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದು ಕ್ಷಮೆ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Related Articles

Back to top button