ಪ್ರಗತಿವಾಹಿನಿ ಸುದ್ದಿ: ಶಿಕ್ಷಕಿಯೊಬ್ಬರನ್ನು ಹತ್ಯೆಗೈದು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಡ್ಯ ಜಿಲ್ಲೆ ಮೇಲುಕೋಟೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣ ಸಂಬಂಧ 30 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಿತೀಶ್ (21) ಬಂಧಿತ ಆರೋಪಿ. ಪ್ಲಾನ್ ಮಾಡಿಯೇ ಶಿಕ್ಷಕಿ ದೀಪಿಕಾಳನ್ನು ಆರೋಪಿ ಹತ್ಯೆಗೈದಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಹಯೆಗೈದ್ದ ನಿತೀಶ್, ಬಳಿಕ ಶವವನ್ನು ಎಳೆದೊಯ್ದು ಗುಂಡಿ ತೋಡಿ ಹೂತು ಹಾಕಿದ್ದ. ಶಾಲೆಗೆ ಹೋಗಿದ್ದ ದೀಪಿಕಾ ಮನೆಗೆ ವಾಪಾಸ್ ಆಗಿರಲಿಲ್ಲ. ಪೋಷಕರು, ಕುಟುಂಬದವರು ಗಾಬರಿಯಾಗಿದ್ದರು. ದೀಪಿಕಾಳ ಪತಿ ಲೋಕೋಶ್ ಪತ್ನಿ ನಾಪತ್ತೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೀಪಿಕಾ ನಾಪತ್ತೆಯಾಗಿದ್ದ ಮಾರನೆ ದಿನ ಆರೋಪಿ ನಿತೀಸ್ ತಾನೇ ದೀಪಿಕಾಳ ತಂದೆಗೆ ಕರೆ ಮಾಡಿ ಅಪ್ಪಾಜಿ ದೀಪಿಕಾ ಅಕ್ಕ ಮನೆಗೆ ಬಂದಿದ್ದಾರಾ? ಎಂದು ಕೇಳಿದ್ದಾನೆ. ಅಕ್ಕಾ ಎಂದು ಕರೆದರೆ ತನ್ನ ಮೇಲೆ ಅನುಮಾನ ಬರಲ್ಲ ಎಂಬುದು ಆರೋಪಿ ಆಲೋಚನೆ ಎನ್ನಲಾಗಿದೆ.
ಕುಟುಂಬದವರು ಮೇಲುಕೋಟೆ ತಪ್ಪಲಿನಲ್ಲಿ ತೀವ್ರ ಹುಡುಕಾಟ ನಡೆಸಿದ್ದಾಗ ದೀಪಿಕಾಳ ಬೈಕ್ ಪತ್ತೆಯಾಗಿತ್ತು. ಪೊಲೀಸರು, ಕುಟುಂಬದವರು ದೀಪಿಕಾರಿಗಾಗಿ ಹುಡುಕಾಟ ನಡೆಸಿದ್ದಾಗ ಹೂಟಿದ್ದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ಮಹಿಳೆಯೊಬ್ಬರನ್ನು ಯುವಕನೊಬ್ಬ ಎಳೆದಾಡುತ್ತಿರುವ ದೃಶ್ಯವನ್ನು ಬೆಟ್ಟದ ಮೇಲಿಂದ ಪ್ರವಾಸಿಗರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಈ ವೇಳೆ ನಿತೀಶ್ ಬಗ್ಗೆ ಅನುಮಾನಗೊಂಡು ದೀಪಿಕಾ ಪತಿ ಲೋಕೇಶ್ ದೂರು ನೀಡಿದ್ದರು. ಆರೋಪಿ ನಿತೇಶ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ