ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲ ಶಿಕ್ಷಕರ ಕೋರಿಕೆ ವರ್ಗಾವಣೆ ಹಾಗೂ ಪರಸ್ಪರ ವರ್ಗಾವಣೆ ಕುರಿತು ಅಧಿಸೂಚನೆ ಹೊರಡಿಸಿದೆ. ಅಲ್ಲದೇ 2019 ರಲ್ಲಿ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಆದ ಶಿಕ್ಷಕರ ವರ್ಗಾವಣೆ ಬಗ್ಗೆಯೂ ಮಾಹಿತಿ ನೀಡಿದೆ.
ಕೋರಿಕೆ ವರ್ಗಾವಣೆ:
1. ಪ್ರಸ್ತುತ ಶಾಲೆಗೆ ನೇಮಕಾತಿ/ ಬಡ್ತಿ/ವರ್ಗಾವಣೆ ಆಗಿ ಬಂದಲ್ಲಿ ಕನಿಷ್ಠ ಸೇವೆ 3 ವರ್ಷ ಆಗಿರಬೇಕು
2. ತೀವೃತರ ಖಾಯಿಲೆ, ಅಂಗವಿಕಲ, ಸೈನಿಕ ಪ್ರಕರಣ, ವಿಧವೆ/ವಿಧುರ ಪ್ರಕರಣಕ್ಕೆ ಶೇಕಡ ಮಿತಿ ಇಲ್ಲ. ಸೇವಾವಧಿಯಲ್ಲಿ ಒಮ್ಮೆ ಮಾತ್ರ ಅವಕಾಶ
3. ದಂಪತಿ ಪ್ರಕರಣ ಪತಿ ಅಥವಾ ಪತ್ನಿ ಒಬ್ಬರು ಶಿಕ್ಷಕರಾಗಿದ್ದು, ಇನ್ನೊಬ್ಬರು ಕೇಂದ್ರ/ರಾಜ್ಯ/ಅನುದಾನಿತ ಸಂಸ್ಥೆಯ ಯಾವುದೇ ಇಲಾಖೆಯ ನೌಕರರು ಆಗಬಹುದು. ಆದರೆ ತಾಲೂಕಿನ ಒಳಗೆ ದಂಪತಿ ಪ್ರಕರಣ ಇಲ್ಲ. ಪತಿ ಅಥವಾ ಪತ್ನಿ ಕರ್ತವ್ಯ ನಿರ್ವಹಿಸುವ ತಾಲೂಕಿಗೆ ಮಾತ್ರ ಅವಕಾಶ
4. ಇತರೆ ಪ್ರಕರಣಗಳಲ್ಲಿ ಪುರುಷರು ಮತ್ತು ಮಹಿಳೆಯರು ಅಂಕಗಳ ಆಧಾರದ ಮೇಲೆ ಆದ್ಯತೆ ಸಿಗುತ್ತದೆ
5. ಹೈದರಾಬಾದ್ ಕರ್ನಾಟಕ ಶಿಕ್ಷಕರು ಹತ್ತು ವರ್ಷ ಸೇವೆ ಸಲ್ಲಿಸಿರಬೇಕು
6. ಎಲ್ಲಾ ಆದ್ಯತೆಗಳು 2020 ರ ವರ್ಗಾವಣೆ ನಿಯಮದ ಪ್ರಕಾರ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಅವಕಾಶ
ಪರಸ್ಪರ ವರ್ಗಾವಣೆ:
1. ಕನಿಷ್ಠ ಸೇವಾವಧಿ 7 ವರ್ಷ
2. ನಿವೃತ್ತಿ ಹೊಂದಲು 5 ವರ್ಷ ಬಾಕಿ ಇರಬಾರದು
3. ಈ ವರ್ಷ ವಲಯದ ನಿರ್ಬಂಧ ಇಲ್ಲ. ಎ ವಲಯದ ಶಿಕ್ಷಕರು ಬಿ, ಸಿ ವಲಯದ ಶಿಕ್ಷಕರ ಜೊತೆಗೆ ಪರಸ್ಪರ ವರ್ಗಾವಣೆ ಪಡೆಯಬಹುದು
4. ಟಿ.ಜಿ.ಟಿ ಯಿಂದ ಟಿ.ಜಿ.ಟಿ ಪರಸ್ಪರ ವರ್ಗಾವಣೆ ಅವಕಾಶ ಕಲ್ಪಿಸಿಲ್ಲ
5. ಈಗಾಗಲೇ ಜೇಷ್ಟತಾ ಘಟಕದ ಹೊರಗೆ ಪರಸ್ಪರ ವರ್ಗಾವಣೆ ಹೊಂದಿದರೆ, ಇನ್ನೊಮ್ಮೆ ಜೇಷ್ಟತಾ ಘಟಕದ ಹೊರಗೆ ಹೋಗಲು ಅವಕಾಶ ಇಲ್ಲ
6. ಜೇಷ್ಟತಾ ಘಟಕದ ಒಳಗಿನ ಪರಸ್ಪರ ವರ್ಗಾವಣೆಗೆ ಯಾವುದೇ ನಿರ್ಬಂಧ ಇಲ್ಲ
2019 ರಲ್ಲಿ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಆದ ಶಿಕ್ಷಕರ ವರ್ಗಾವಣೆ ಮಾಹಿತಿ:
ಕಳೆದ ವರ್ಷ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಯಲ್ಲಿ ಬಂದ ಶಿಕ್ಷಕರು, ಈ ವರ್ಷ ಮೊದಲ ಆದ್ಯತೆಯಲ್ಲಿ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಯಾವುದೇ ಶೇಕಡಾವಾರು ನಿಗದಿ ಇಲ್ಲ. ತಾಲೂಕಿನ ಒಳಗೆ ವರ್ಗಾವಣೆಗೆ ಅವಕಾಶ ಇಲ್ಲ. ಇವರು ಪ್ರಸ್ತುತ ಶಾಲೆಯಲ್ಲಿ ಕನಿಷ್ಟ ಸೇವಾವಧಿ ಪೂರೈಸದ ಕಾರಣ ಕೋರಿಕೆ ಹಾಗೂ ಪರಸ್ಪರ ವರ್ಗಾವಣೆಗೆ ಅವಕಾಶ ಇಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ