
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಾಲಿವುಡ್ ಚಿತ್ರ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕನ್ನಡಕ್ಕೆ ಡಬ್ ಮಾಡಿ, ಕನ್ನಡಿಗರಿಗೆ ತೋರಿಸುವ ಚಿಂತನೆ ರಾಜ್ಯ ಸರ್ಕಾರ ನಡೆಸಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತ ಸಚಿವರ ಜತೆ ಸಮಲೋಚನೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈಗಾಗಲೇ ರಾಜ್ಯ ಸರ್ಕಾರದಿಂದ ಸಚಿವರು, ಶಾಸಕರಿಗೆ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ಘೋಷಿಸಲಾಗಿದೆ. ರಾಜ್ಯದ ಜನತೆಗೆ ಸಿನಿಮಾ ತೋರಿಸುವ ನಿಟ್ಟಿನಲ್ಲಿ ಕನ್ನಡಕ್ಕೆ ಡಬ್ ಮಾಡುವ ಪ್ಲಾನ್ ಕೂಡ ನಡೆದಿದೆ.
ಬಿಜೆಪಿ ನಾಯಕರು ಕಾಶ್ಮೀರ್ ಫೈಲ್ಸ್ ಚಿತ್ರ ನೋಡಲೇಬೇಕು ಎಂಬ ನಿಟ್ಟಿನಲ್ಲಿ ಜನರನ್ನು ಪ್ರೇರೇಪಿಸುವ ಮಾತುಗಳನ್ನು ಆಡುತ್ತಿದ್ದು, ಕೆಲ ಸಚಿವರು, ಶಾಸಕರಿಂದ ಆಯಾಕ್ಷೇರಗಳಲ್ಲಿ ಉಚಿತವಾಗಿ ಸಿನಿಮಾ ತೋರಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಒಟ್ಟಾರೆ ಕನ್ನಡ ಭಾಷೆಯಲ್ಲಿಯೂ ದಿ ಕಾಶ್ಮೀರ್ ಫೈಲ್ಸ್ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
15,000 ಶಿಕ್ಷಕರ ನೇಮಕ ; ನೇಮಕಾತಿ ಪ್ರಕ್ರಿಯೆ ವಿವರ ನೀಡಿದ ಸಚಿವ ಬಿ.ಸಿ.ನಾಗೇಶ್