ಪ್ರಗತಿವಾಹಿನಿ ಸುದ್ದಿ ಅಹಮದಾಬಾದ್ : ಟೀಂ ಇಂಡಿಯಾದ ಓಪನರ್ ಶೀಖರ್ ಧವನ್, ಋತುರಾಜ್ ಗಾಯಕವಾಡ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸೇರಿದಂತೆ ಮೂವರು ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಭಾರತ- ವೆಸ್ಟಿಂಡೀಸ್ ನಡುವೆ ಮಹತ್ವದ ಕ್ರಿಕೇಟ್ ಸರಣಿಯ ಆರಂಭಕ್ಕೂ ಪೂರ್ವದಲ್ಲಿ ಟೀಂ ಇಂಡಿಯಾಗೆ ಆಘಾತ ಉಂಟು ಮಾಡುವ ವಿದ್ಯಮಾನ ಇದಾಗಿದೆ. ಸರಣಿಗಾಗಿ ಅಹಮದಾಬಾದ್‌ಗೆ ಬಂದಿಳಿದಿದ್ದ ತಂಡವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬುಧವಾರ ಸಂಜೆ ವರದಿ ಬಂದಿದ್ದು ಮೂವರು ಪ್ರಮುಖ ಆಟಗಾರರೂ ಸೇರಿದಂತೆ ಏಳು ಜನರಿಗೆ ಕೋವಿಡ್ ದೃಢಪಟ್ಟಿದೆ.
ಸ್ಟ್ಯಾಂಡ್ ಬೈ ಆಟಗಾರನಿಗೂ ಕೋವಿಡ್
ನೆಟ್ ಬೌಲರ್ ಆಗಿರುವನವದೀಪ್ ಸೈನಿ ಸಹ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೇ ಮೂವರು ಸಿಬ್ಬಂದಿಗೂ ಸಹ ಕೋವಿಡ್ ದೃಢಪಟ್ಟಿರುವುದಾಗಿ ವರದಿಯಾಗಿದೆ. ಭಾರತ ವೆಸ್ಟಿಂಡೀಸ್ ಸರಣಿಯ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ಫೆ.೬ರಿಂದ ಆರಂಭಗೊಳ್ಳಲಿದ್ದು ಆಟಗಾರರು ಈಗಾಗಲೇ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಆದರೆ ಪಂದ್ಯ ಆರಂಭಕ್ಕೂ ಪೂರ್ವದಲ್ಲಿ ಪ್ರಮುಖ ಆಟಗಾರರು ಕೋವಿಡ್ ಸೋಂಕಿಗೆ ಒಳಪಟ್ಟಿರುವುದು ಭಾರಿ ಆಘಾತ ಉಂಟುಮಾಡಿದೆ.
ಮೂವರು ಪ್ರಮುಖ ಆಟಗಾರರಿಗೆ ಕೋವಿಡ್ ಸೋಂಕು ತಗುಲಿರುವುದರ ಜೊತೆಗೆ ನಾನ್ ಕೋಚಿಂಗ್ ಸ್ಟಾಪ್‌ಗಳಲ್ಲೂ ಕೆಲವರಿಗೆ ಸೋಂಕು ಖಚಿತಪಟ್ಟಿದೆ. ಇದರಿಂದ ಸರಣಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೂವರು ಪ್ರಮುಖ ಆಟಗಾರರು ಒಂದು ವಾರಗಳ ಕಾಲ ಐಸೋಲೇಷನ್‌ಗೆ ಒಳಗಾಗಬೇಕಿರುವುದರಿಂದ ಅವರು ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.
ವಾಪಸ್ ಜೈಲಿಗೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಖೈದಿ ! ಅಚ್ಚರಿಯ ವಿದ್ಯಮಾನಕ್ಕೆ ಕಾರಣ ಗೊತ್ತೆ ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ