
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಯುವಕನನ್ನು ಅಪಹರಿಸಿ, 10 ಲಕ್ಷ ರೂಪಾಯಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಕಲ್ಯಾಣನಗರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರಾಹುಲ್, ಕೆಲ ದಿನಗಳ ಹಿಂದೆ ಮೋಜು-ಮಸ್ತಿಗಾಗಿ ಬ್ರಿಗೇಡ್ ರೋಡ್ ಗೆ ತೆರಳಿದ್ದಾಗ ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದರು. ಮೋಜಿಗಾಗಿ ಬ್ರಿಗೇಡ್ ರೋಡ್ ಗೆ ಆಟೋದಲ್ಲಿ ಮಧ್ಯರಾತ್ರಿ ತೆರಳಿದ್ದ ರಾಹುಲ್ ಗೆ ತಡರಾತ್ರಿ 3ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಮೋಜು-ಮಸ್ತಿಗೆ ಯುವತಿಯರಿದ್ದಾರೆ ಎಂದು ರಾಹುಲ್ ಗೆ ತೋರಿಸಿದ್ದ. ಅಲ್ಲದೇ ತನ್ನ ಮೊಬೈಲ್ ನಲ್ಲಿದ್ದ ಯುವತಿಯರ ಫೋಟೋವನ್ನೂ ರಾಹುಲ್ ಗೆ ತೋರಿಸಿದ್ದ. ತನಗೆ ಇವೆಲ್ಲ ಇಷ್ಟವಿಲ್ಲ ಎಂದು ರಾಹುಲ್ ತಕ್ಷಣ ಸ್ಥಳದಿಂದ ಆಟೋದಲ್ಲಿ ತೆರಳಿದ್ದ.
ರಾಹುಲ್ ನನ್ನು ಫಾಲೋ ಮಾಡಿಕೊಂಡು ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ದೂರದವರೆಗೆ ಹಿಂಬಾಲಿಸಿದೆ. ತನ್ನನ್ನು ಫಾಲೋ ಮಾಡಿಕೊಂಡು ಬರುತ್ತಿರುವುದನ್ನು ಗಮನಿಸಿದ ರಾಹುಲ್ ಆಟೋ ಚಾಲಕನಿಗೆ ಪೊಲೀಸ್ ಠಾಣೆಗೆ ಹೋಗುವಂತೆ ಹೇಳಿದ್ದಾನೆ. ಪೊಲೀಸ್ ಠಾಣೆಗೆ ಹೋಗುವ ಮಾರ್ಗಮಧ್ಯೆಯೇ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಅಶೋಕನಗರದ ಸೆಂಟ್ರಲ್ ಮಾಲ್ ಬಳಿ ರಾಹುಲ್ ನನ್ನು ಅಪಹರಿಸಿತ್ತು.
ರಾತ್ರಿ ಪೂರ್ತಿ ಇಡೀ ಬೆಂಗಳೂರನ್ನು ಸುತ್ತಾಡಿಸಿದ್ದ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಎಟಿಎಂ ಕಿತ್ತುಕೊಂಡು ಹಣ ಡ್ರಾ ಮಾಡಿಕೊಂಡು, ಅತನಬಳಿ ಇದ್ದ ಚಿನ್ನಾಭರಣವನ್ನು ದೋಚಿದ್ದರು. ಬಳಿಕ ರಾಹುಲ್ ಮನೆಯವರಿಗೆ ಕರೆ ಮಾಡಿ 2 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಅವರಿಂದಲೂ ರಾಹುಲ್ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದರು. ಬಳಿಕ ರಾಹುಲ್ ನನ್ನು ಸ್ಥಳದಲ್ಲೇ ಬಿಟ್ಟು ಕಾರ್ಡ್ ಸಮೇತ್ ಎಸ್ಕೇಪ್ ಆಗಿದ್ದರು.
ಮರುದಿನ ಅಶೋಕನಗರ ಠಾಣೆಯಲ್ಲಿ ರಾಹುಲ್ ಪ್ರಕರಣ ದಾಖಲಿಸಿದ್ದ. ಅಶೋಕನಗರ ಠಾಣೆ ಪೊಲಿಸರು ಇದೀಗ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಕರೆಂಟ್ ಶಾಕ್; ಗಾಯಗೊಂಡಿದ್ದ ಬಾಲಕ ಸಾವು
https://pragati.taskdun.com/electrick-shockboy-deathbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ