Karnataka NewsLatest

*ಇದ್ದಕ್ಕಿದ್ದಂತೆ ನಾಪತ್ತೆಯಾದ ಟೆಕ್ಕಿ: ಪತ್ನಿ, ಮಕ್ಕಳು ಕಂಗಾಲು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ಕಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ವಿಪಿನ್ ಗುಪ್ತಾ (37) ನಾಪತ್ತೆಯಾಗಿರುವ ಟೆಕ್ಕಿ. ಬೆಂಗಲೂರಿಇನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು. ಕಳೆದ ಎಂಟು ದಿನಗಳಿಂದ ಮನೆಗೆ ವಾಪಾಸ್ ಆಗಿಲ್ಲ. ಇದರಿಂದ ಪತ್ನಿ ಹಾಗೂ ಮಕ್ಕಳು ಕಂಗಾಲಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಪಿನ್ ಗುಪ್ತಾ ಉತ್ತರ ಪ್ರದೇಶದ ಲಖನೌ ಮೂಲದವರಾಗಿದ್ದು, ಮೂರು ವರ್ಷಗಳಿಂದ ಪತ್ನಿ, ಮಕ್ಕಳ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆಗಸ್ಟ್ 4ರಂದು ಮಧ್ಯಾಹ್ನ ಏಕಾಏಕಿ ಕೈಯಲ್ಲಿ ಟೀ ಶರ್ಟ್ ಹಿಡಿದುಕೊಂಡು ತಮ್ಮ ಬೈಕ್ ಏರಿ ಮನೆಯಿಂದ ಹೊರಟಿದ್ದಾರೆ. ಪತ್ನಿಗೂ ಹೇಳದೇ ವಿಪಿನ್ ಮನೆಯಿಂದ ಹೊರ ಹೋದವರು ಈವರೆಗೆ ವಾಪಾಸ್ ಆಗಿಲ್ಲ. ಅವರು ಮನೆ ಬಿಟ್ಟ ಕೆಲವೇ ಸಮಯದಲ್ಲಿ ಅಕೌಂಟ್ ನಿಂದ 1ಲಕ್ಷದ 80 ಸಾವಿರ ರೂಪಾಯಿ ಡ್ರಾ ಆಗಿದೆಯಂತೆ. ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು, ಆತಂಕದಲ್ಲಿರುವ ವಿಪಿನ್ ಪತ್ನಿ ಹಾಗೂ ಮಕ್ಕಳು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button