Latest

ಭಾರತ- ಪಾಕ್ ಪಂದ್ಯದ ನಂತರ ಭುಗಿಲೆದ್ದ ಹಿಂದು- ಮುಸ್ಲಿಂ ಗಲಭೆ

ಪ್ರಗತಿವಾಹಿನಿ ಸುದ್ದಿ, ಲಂಡನ್: ಭಾರತ-ಪಾಕ್ ಪಂದ್ಯದ ನಂತರ ಯುಕೆ ಲೀಸೆಸ್ಟರ್‌ ನಗರದಲ್ಲಿ ಹಿಂದೂ-ಮುಸ್ಲಿಂ ಘರ್ಷಣೆಗಳು ಭುಗಿಲೆದ್ದಿವೆ.

ಭಾರತ-ಪಾಕಿಸ್ತಾನ ಏಷ್ಯಾ ಕಪ್ T20 ಕ್ರಿಕೆಟ್ ಪಂದ್ಯದ ದಿನವಾದ ಆಗಸ್ಟ್ 28 ರಂದು ಮೊದಲ ಬಾರಿಗೆ ಘರ್ಷಣೆ ಆರಂಭಗೊಂಡು ಪರಿಸ್ಥಿತಿ ಉದ್ವಿಗ್ನವಾಯಿತು. ಪೊಲೀಸರು ನಿಯಂತ್ರಣಕ್ಕೆ ಹರಸಾಹಸ ಮಾಡಿದರೂ ಉಭಯ ಕೋಮುಗಳ ಜನರ ಮಧ್ಯೆ ದ್ವೇಷಾಗ್ನಿ ಶಮನವಾಗಲೇ ಇಲ್ಲ. 

ಕಳೆದ ಕೆಲವು ದಿನಗಳಿಂದ ದೊಡ್ಡ ಪ್ರಮಾಣದ ಅಶಾಂತಿ ಸೃಷ್ಟಿಯಾಗಿದೆ.  ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಗುಂಪುಗಳು ಬೀದಿಗಳಲ್ಲಿ ಘರ್ಷಣೆ ಮಾಡುತ್ತಿವೆ. ವಾರಾಂತ್ಯದಲ್ಲಿ ವರದಿಯಾದ ಹಿಂಸಾತ್ಮಕ ಘರ್ಷಣೆಯ ನಂತರ ಕನಿಷ್ಠ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಷಯಕುಮಾರ್ ಚಿತ್ರಗಳನ್ನು ಒಪ್ಪುವುದಿಲ್ಲವಂತೆ ಸ್ವರಾ; ಫ್ಲಾಪ್ ಆಗುವುದನ್ನೂ ಬಯಸುವುದಿಲ್ಲವಂತೆ

Home add -Advt

Related Articles

Back to top button