ತಾಂತ್ರಿಕ ಸಮಸ್ಯೆ: ಚಂದ್ರಯಾನ 2 ಉಡಾವಣೆ ಮುಂದಕ್ಕೆ
ಶ್ರೀಹರಿಕೋಟ – ಇಂದು ಬೆಳಗಿನಜಾವ ಉಡಾವಣೆಗೊಳ್ಳಬೇಕಿದ್ದ ಚಂದ್ರಯಾನ -2 ಉಡಾವಣೆಯನ್ನು ಮುಂದೂಡಲಾಗಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದು, ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಸ್ರೋ ಈ ನಿರ್ಧಾರ ಪ್ರಕಟಿಸಿತು. ಹೊಸ ದಿನಾಂಕ ಘೋಷಣೆಯಾಗಬೇಕಿದೆ.
ಭಾರತದ ಅತಿ ಭಾರದ ರಾಕೆಟ್ ‘ಬಾಹುಬಲಿ’ ಎಂದು ಹೆಸರಿಸಲಾದ ಜಿಎಸ್‌ಎಲ್‌ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಇದರಲ್ಲಿ ನಾಸಾದ ಒಂದು ಉಪಕರಣವೂ ಇದೆ. ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ. 978 ಕೋಟಿ ರೂ ಯೋಜನಾ ವೆಚ್ಚವಾಗಿದೆ.
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್‌ಎಲ್‌ವಿ ಮಾಕ್-3 ಬಾಹುಬಲಿ ಉಢಾವಣಾ ವಾಹನದಲ್ಲಿ ಗಗನನೌಕೆ ಸಾಗಬೇಕಾಗಿತ್ತು. ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ. ಚಲನೆಗೆ ನೆರವಾಗಲು ವಿಶೇಷ ಮೋಷನ್ ಪ್ಲ್ಯಾನಿಂಗ್ ಹಾಗೂ ಮ್ಯಾಪಿಂಗ್‌ನ ತಂತ್ರಾಂಶ ಇದಾಗಿದೆ.
ಈ ಹಿಂದೆ ಚಂದ್ರಯಾನ-1 ಮತ್ತು ಮಂಗಳಯಾನದ ಉಪಗ್ರಹ ವನ್ನು ಪಿಎಸ್ಎಲ್ವಿ ಕ್ಲಾಸ್ನ ರಾಕೆಟ್ನಿಂದ ಉಡಾವಣೆ ಮಾಡಲಾಗಿತ್ತು. ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ