Latest

ಟೀರಾ ಕಾಮತ್ ಔಷಧಿ ಮೇಲಿನ ತೆರಿಗೆ ಮನ್ನಾಗೆ ಪ್ರಧಾನಿ ಸಮ್ಮತಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: 5 ತಿಂಗಳ ಮಗು ಟೀರಾ ಕಾಮತ್ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಜೀವ ಉಳಿಸಲು ಅಮೇರಿಕಾದಿಂದ ಔಷಧ ತರಿಸಬೇಕಿದ್ದು, ಈ ಔಷಧದ ಮೇಲಿನ ಆಮದು ತೆರಿಗೆಯನ್ನು ಕಡಿತಗೊಳಿಸಲು ಪ್ರಧಾನಿ ಮೋದಿ ಸಮ್ಮತಿ ಸೂಚಿಸಿದ್ದಾರೆ.

ಟೀರಾ ಕಾಮತ್ ಗೆ 16 ಕೋಟಿ ರೂ ಮೌಲ್ಯದ ಔಷಧವನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದ್ದು, ಇದರ ಮೇಲಿನ 6 ಕೋಟಿ ರೂಗಳ ಜಿಎಸ್ ಟಿ ಮೊತ್ತವನ್ನು ಪ್ರಧಾನಿ ಮೋದಿ ಮನ್ನಾ ಮಾಡಿದ್ದಾರೆ.

ಈಗಾಗಲೇ ಟೀರಾ ಚಿಕಿತ್ಸೆಗಾಗಿ ಪೋಷಕರು 16 ಕೋಟಿ ರೂ ವನ್ನು ಕ್ರೌಡ್-ಫಂಡಿಂಗ್ ಮೂಲಕ ಸಂಗ್ರಹಿಸಿದ್ದು, ಔಷಧದ ಆಮದು ಸುಂಕವನ್ನು ಮನ್ನಾ ಮಾಡುವಂತೆ ಟೀರಾ ಪೋಷಕರು ಪ್ರಧಾನಿ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಟೀರಾ ಔಷಧ ಆಮದು ಸುಂಕ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button