Kannada NewsKarnataka NewsNationalPolitics

*ಟೆಲಿಗ್ರಾಂನ ಸಿಇಒ ಪವೆಲ್ ಡೊರಾವ್ ಬಂಧನ*

ಪ್ರಗತಿವಾಹಿನಿ ಸುದ್ದಿ: ಜನ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್‌ನ್ನು ಚ್ಯಾಟ್ ಮಾಡಲು ಮಾತ್ರವಲ್ಲದೇ ಸಿನಿಮಾ ಡೌನ್ ಲೋಡ್ ಮಾಡಲು ಉಯಯೋಗಿಸುತ್ತಾರೆ. ಇದೀಗ ಟೆಲಿಗ್ರಾಂನ ಸಿಇಒ ಪವೆಲ್ ಡೊರಾವ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅಪರಾಧ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂಬ ಆರೋದಡಿಯಲ್ಲಿ ಡೊರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪವೆಲ್ ಡೊರಾವ್ ಬಿಲಿಯನೇರ್ ಉದ್ಯಮಿ ಹಾಗೂ ಟೆಲಿಗ್ರಾಂ ಅಪ್ಲಿಕೇಶನ್‌ನ ಸ್ಥಾಪಕರಾಗಿದ್ದಾರೆ. ಅವರನ್ನು ಶನಿವಾರ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಹಿಡಿಯಲಾಗಿದೆ.

ಡೊರಾವ್ ತನ್ನ ಖಾಸಗಿ ಜೆಟ್ ಮೂಲಕ ವಿದೇಶಕ್ಕೆ ಪ್ರಯಾಣಿಸುತ್ತಿದ್ದರು. ಅವರ ವಿರುದ್ಧ ಫ್ರಾನ್ಸ್ ನಲ್ಲಿ ಪೊಲೀಸ್ ವಾರಂಟ್ ಜಾರಿಯಾಗಿರುವ ಕಾರಣ ಪ್ರಾಥಮಿಕ ತನಿಖೆಗಾಗಿ ಅವರನ್ನು ಬಂಧಿಸಲಾಗಿದೆ.

Home add -Advt

ಈ ಬಂಧನದ ಬಗ್ಗೆ ಇದುವರೆಗೆ ಟೆಲಿಗ್ರಾಂ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಫ್ರಾನ್ಸ್ ಪೊಲೀಸರು ಕೂಡಾ ಯಾವುದೇ ಮಾಹಿತಿ ಒದಗಿಸಿಲ್ಲ.

Related Articles

Back to top button