Latest

ದೇಗುಲಗಳ ರಕ್ಷಣೆಗೆ ಮುಂದಾದ ಸರ್ಕಾರ; ವಿಶೇಷ ವಿಧೇಯಕ ಮಂಡನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಗುಲಗಳ ತೆರವು ಮಾಡಿದ್ದ ಜಿಲ್ಲಾಡಳಿತಗಳ ಕ್ರಮಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ದೇವಾಲಯಗಳ ರಕ್ಷಣೆಗೆ ಮುಂದಾಗಿದ್ದು, ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯವನ್ನು ಮಂಡಿಸಿದೆ.

ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ ಸಿಎ ಬಸವರಾಜ್ ಬೊಮ್ಮಾಯಿ, ಕಾನೂನಿನಲ್ಲಿ ಏನೆ ಇದ್ದರೂ ಧಾರ್ಮಿಕ ಕಟ್ಟಗಳ ರಕ್ಷಣೆ ಕಾರ್ಯ ನಡೆಯಬೇಕು ಎಂದು ಹೇಳಿದರು.

ವಿಧೇಯಕದ ಪ್ರಮುಖ ಅಂಶಗಳು:
* ಎಲ್ಲ ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಸರ್ಕಾರ ಬದ್ಧ
* ಭವಿಷ್ಯದಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ
* ಸುಪ್ರೀಂಕೋರ್ಟ್‌ ತೀರ್ಪು ತೆರವು ನೀಡಿದ್ದರೂ ಮರು ಪರಿಶೀಲನೆ
* ಸರ್ಕಾರದ ನಿಯಮಗಳಿಗೆ ಅನುಸಾರ ಧಾರ್ಮಿಕ ಕಟ್ಟಡಗಳಿದ್ದರೆ ರಕ್ಷಣೆ
* ಸರ್ಕಾರದ ನಿಯಮಗಳಿಗೆ ಒಳಪಡದ ಧಾರ್ಮಿಕ ಕಟ್ಟಡಗಳ ತೆರವು
* ದೇಗುಲ, ಚರ್ಚ್‌, ಮಸೀದಿ, ಗುರುದ್ವಾರ, ಬೌದ್ಧ ವಿಹಾರ ಧಾರ್ಮಿಕ ಕಟ್ಟಡಗಳ ವ್ಯಾಪ್ತಿಗೆ
* ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅನುಮತಿ ಪಡೆಯದೇ ನಿರ್ಮಿಸಿದ್ದರೂ ರಕ್ಷಣೆ

ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾದ ಬಳಿಕ ಕಾನೂನು ಜಾರಿಯಾಗಲಿದೆ.

ನಂಜನಗೂಡು ಹುಚ್ಚಗಣಿ ದೇಗುಲ ತೆರವಿನ ಬಳಿಕ ಹಲವು ಜಿಲ್ಲೆಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೆಪ ನೀಡಿ ದೇಗುಲ ತೆರವು ಕಾರ್ಯ ಆರಂಭವಾಗಿತ್ತು. ಇದು ಹಿಂದೂಪರ ಸಂಘಟನೆ ಹಾಗೂ ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸಾರ್ವಜನಿಕ ವಲಯದಿಂದಲೂ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಸರ್ಕಾರ ದೇಗುಲಗಳ ರಕ್ಷಣೆಗೆ ಮುಂದಾಗಿದೆ.
ದೇವಸ್ಥಾನ ಪುನರ್ ನಿರ್ಮಾಣಕ್ಕೆ 20 ಲಕ್ಷ ರೂ ಬೇಡಿಕೆ: ಶಾಸಕ ಹರ್ಷವರ್ಧನ್ ಮನವಿಗೆ ಸಿಎಂ ಸ್ಪಂದನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button