ದೇವಸ್ಥಾನ ಪುನರ್ ನಿರ್ಮಾಣಕ್ಕೆ 20 ಲಕ್ಷ ರೂ ಬೇಡಿಕೆ: ಶಾಸಕ ಹರ್ಷವರ್ಧನ್ ಮನವಿಗೆ ಸಿಎಂ ಸ್ಪಂದನೆ

 ಉಚ್ಚಗಣಿ ದೇವಾಲಯ ಮರುನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಕೋರಿ ಶಾಸಕ ಹರ್ಷವರ್ಧನ್ ಮನವಿ

ಬೆಂಗಳೂರು –   ನಂಜನಗೂಡು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-57ರ ಬಳಿ ಇದ್ದ ಉಚ್ಚಗಣಿ ಮಹದೇವಮ್ಮ ದೇವಾಲಯ ಪುನರ್ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ. ಉಚ್ಚಗಣಿ ದೇವಸ್ಥಾನವನ್ನು  ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ, ಮೈಸೂರು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಮತ್ತು ಪುರಾತತ್ವ ಸಂಗ್ರಹಾಲಯ ಇಲಾಖಾ ವತಿಯಿಂದ  ನೆಲಸಮಗೊಳಿಸಲಾಗಿದೆ.

Home add -Advt
ಆದರೆ, ಇದರಿಂದಾಗಿ ಇಲ್ಲಿನ ಗ್ರಾಮಸ್ಥರ ನಂಬಿಕೆಗೆ ಧಕ್ಕೆಯಾಗಿರುವುದರಿಂದ ಮತ್ತು ಧಾರ್ಮಿಕ ಆಚರಣೆಗೆ ಅಡಚಣೆ ಉಂಟಾಗಿರುವುದರಿಂದ,  ಈ ದೇವಸ್ಥಾನವನ್ನು ಇಲ್ಲಿನ ಗ್ರಾಮಸ್ಥರು ನೀಡಿರುವ ಜಾಗದಲ್ಲಿ  ಮರುನಿರ್ಮಾಣ ಮಾಡಲು 20 ರೂ. ಲಕ್ಷಗಳ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಹರ್ಷವರ್ಧನ್ ಕೋರಿದ್ದಾರೆ.
ಸಿಎಂ ಸ್ಪಂದನೆ – ಮನವಿ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಡತ ಮಂಡಿಸಿ ಮಂಜೂರು ಮಾಡಲು ಕ್ರಮ ಜರುಗಿಸುವುದು ಎಂದು ಶರಾ ಬರೆದಿದ್ದಾರೆ.

Related Articles

Back to top button