Karnataka News

*ದೇವಸ್ಥಾನಗಳ ಕಾಣಿಕೆ ಹಣ ಬಳಕೆ: ಬೋರ್ಡ್ ಹಾಕಲು ಮುಜರಾಯಿ ಇಲಾಖೆ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ಆಯಾ ದೇವಸ್ಥಾನಗಳ ಹುಂಡಿ ಹಣ, ಕಾಣಿಕೆ ಹಣವನ್ನು ಅದೇ ದೇವಸ್ಥಾನಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು. ಈ ಬಗ್ಗೆ ಮುಜರಾಯಿ ದೇವಾಲಯಗಳ ಮುಂದೆ ಬೋರ್ಡ್ ಅಳವಡಿಸಲು ಸರ್ಕಾರ ಮುಂದಾಗಿದೆ.

ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕಾಣಿಕೆ ಹಣ ಅನ್ಯಧರ್ಮದವರಿಗೆ ಧಾರೆ ಎರೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ವಿಶೇಷ ಬೋರ್ಡ್ ಅಳವಡಿಸಲು ನಿರ್ಧರಿಸಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 34,564 ಅಧಿಸೂಚಿತ ಸಂಸ್ಥೆಗಳಿವೆ. ಇದರಲ್ಲಿ ಪ್ರವರ್ಗ ಎ ಅಡಿಯಲ್ಲಿ 205, ಪ್ರವರ್ಗ ಬಿ ಅಡಿಯಲ್ಲಿ 193 ಹಾಗೂ ಪ್ರವರ್ಗ ಸಿ ಅಡಿಯಲ್ಲಿ 34166 ದೇವಸ್ಥಾನಗಳಿವೆ. ಈ ದೇವಸ್ಥನಗಳ ಮುಂದೆ ಡಿಸೆಂಬರ್ ಬಳಿಕ ಹಂತಹಂತವಾಗಿ ಬೋರ್ಡ್ ಅಳವಡಿಸಲಾಗುತ್ತದೆ.

ಈ ಮುಜರಾಯಿ ದೇವಸ್ಥಾನದ ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ದೇವಳಕ್ಕೆ ಬರುವ ಭಕ್ತರಿಗೆ ಎದ್ದುಕಾಣುವಂತೆ ಬೋರ್ಡ್ ಹಾಕಲಾಗುತ್ತದೆ. ಈ ಮೂಲಕ ಭಕ್ತರಲ್ಲಿ ಮುಡೂವ ಸಂಶಯ ದೂರ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತುದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button