ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ದೇವಾಲಯಗಳ ಬಾಗಿಲು ತೆರೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಅನ್ವಯ ದೇವಸ್ಥಾನಗಳ ಬಾಗಿಲು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ದೇವಾಲಯಗಳನ್ನು ತೆರೆಯಲು ಪಾಲಿಸಲೇ ಬೇಕಾದ ಕೆಲ ಮಾರ್ಗಸೂಚಿಯನ್ನು ಸರ್ಕಾರ ತಿಳಿಸಿದ್ದು, ದೇವಸ್ಥಾನಗಳನ್ನು ತೆರೆದ ಬಳಿಕ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡುವುದು. ನಂತರ ದೇವಸ್ಥಾನಗಳನ್ನು ಮುಚ್ಚುವಾಗಲು ಸ್ಯಾನಿಟೈಸರ್ ಮಾಡಿ ಬಾಗಿಲು ಬಂದ್ ಮಾಡುವುದು. ದೇವಸ್ಥಾನ ಆವರಣದಲ್ಲಿ ಶುಚಿತ್ವ ಕಾಪಾಡುವುದು ಪ್ರಮುಖವಾಗಿದೆ.
ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಹೂವು-ಹಣ್ಣು ಸೇರಿದಂತೆ ಯಾವುದೇ ಪೂಜೆ ಸಾಮಗ್ರಿಗಳನ್ನು ತರಬಾರದು. ಭಕ್ತರಿಗೆ ದೂರದಿಂದಲೇ ಮಂಗಳಾರತಿ ವಿತರಿಸುವುದು. ಬ್ರಹ್ಮ ರಥೋತ್ಸವ ಸೇರಿದಂತೆ ಉತ್ಸವಗಳನ್ನು ಮಾಡಲು ಅವಕಾಶವಿರುವುದಿಲ್ಲ. ದೇವಸ್ಥಾನದ ಆವರಣದಲ್ಲಿ ಹೆಚ್ಚು ಜನರನ್ನು ಸೇರಿಸಿ ಯಾವುದೇ ಸಭೆ ಮಾಡಬಾರದು , ದೇವಸ್ಥಾನದ ಆವರಣದಲ್ಲಿ ನಡೆಯುವ ಮದುವೆಗಳು ಸರ್ಕಾರದ ಆದೇಶದ ಅನ್ವಯ ನಡೆಯಬೇಕು.
ಥರ್ಮಲ್ ಸ್ಕ್ರೀನಿಂಗ್ ಮಾಡಿ ಭಕ್ತಾದಿಗಳನ್ನು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು . ಅರ್ಚರು ಮಾಸ್ಕ್ ಧರಿಸುವುದು, ಭಕ್ತಾದಿಗಳು ಸಾಮಾಜಿ ಅಂತರ ಕಾಯ್ದುಕೊಳ್ಲುವುದು ಕಡ್ಡಾಯ. ಸರ್ಕಾರದ ಈ ಮಾರ್ಗಸೂಚಿ ಪಾಲನೆಗಾಗಿ ನೋಡ್ಲ್ ಅಧಿಕಾರಿ ನೇಮಕ ಮಾಡಲು ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ