Latest

ಪ್ರಯಾಣಿಕರ ಟೆಂಪೊ ಬೆಂಕಿಗಾಹುತಿ

ಪ್ರಗತಿವಾಹಿನಿ ಸುದ್ದಿ; ಜೈಪುರ: ಪ್ರಯಾಣಿಕರ ಟೆಂಪೊವೊಂದಕ್ಕೆ ರಸ್ತೆ ಮಧ್ಯೆಯೇ ಬೆಂಕಿ ಹೊತ್ತಿಕೊಂಡಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರು ಟೆಂಪೊದಿಂದ ಜಿಗಿದು ಪ್ರಾಣ ಉಳಿಸಿಕೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ.

ಟೆಂಪೊ ನಿಮಕಥಾನ್ ದಿಂದ ಪಾಟ್ನಾದತ್ತ ತೆರಳುತ್ತಿತ್ತು, ಚಾಲಕ ಸೇರಿ 15 ಜನರು ಟೆಂಪೊದಲ್ಲಿದ್ದರು. ಚಲಿಸುತ್ತಿದ್ದ ಟೆಂಪೊದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಹಾಗೂ ಪ್ರಯಾಣಿಕರು ಟೆಂಪೊದಿಂದ ಕೆಳಗೆ ಜಿಗಿದು ಪಾರಾಗಿದ್ದಾರೆ.

Home add -Advt

ಟೆಂಪೊ ನೋಡ ನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ

Related Articles

Back to top button